ಬೆಂಗಳೂರು : ಎಸ್.ಕೆ.ಗಾರ್ಡನ್ ವಾರ್ಡ್-61 ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಆದರೆ ಮಾಧ್ಯಮಗಳಲ್ಲಿ ಪಕ್ಕದ ಡಿಜೆ ಹಳ್ಳಿಯ ವ್ಯಾಪ್ತಿಯಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂಬ ವರದಿಗಳು ಪ್ರಕಟ ಮತ್ತು ಪ್ರಸಾರವಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ ಸ್ಪಷ್ಟನೆ ನೀಡಿದರು.
ಈ ವಿಚಾರವಾಗಿ ಮಾತನಾಡಿದ ಅವರು, ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿರುವ ಜನರು ಭಯಭೀತರಾಗಿದ್ದಾರೆ. ಅಲ್ಲದೇ ದಿನಗೂಲಿ ನೌಕರರು, ದಿನ ನಿತ್ಯ ಯಾವುದಾದರೂ ಕೆಲಸ ನಿರ್ವಹಿಸಿ ಜೀವನ ನಡೆಸುವವರಿಗೆ ಇಂತಹ ಪ್ರಸಂಗದಿಂದ ತೊಂದರೆಯಾಗಿದೆ. ಸಾರ್ವಜನಿಕರು ದೈನಂದಿನ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಡಿ.ಜೆ.ಹಳ್ಳಿಯ ಸಾಮಾನ್ಯ ನಾಗರಿಕರು ದಿನ ನಿತ್ಯದ ಜೀವನ ನಡೆಸುವುದು ತುಂಬಾ ಕಷ್ಟ ಸಾಧ್ಯವಾಗಿದೆ. ಜೊತೆಗೆ ಅಕ್ಕ ಪಕ್ಕದ ವಾಡ್೯ಗಳಿಗೆ ತೆರಳಲು ಸಹ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ.
ಅದ್ದರಿಂದ ಕೂಲಿಕಾರ್ಮಿಕರ ದೈನಂದಿನ ಕೆಲಸಕ್ಕೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಡಿಜೆಹಳ್ಳಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಪ್ರಕರಣಗಳು ಪತ್ತೆಯಾಗುತ್ತಿಲ್ಲ ಎಂಬುದರ ಬಗ್ಗೆ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ ಸ್ಪಷ್ಟನೆ ನೀಡಿದರು.








