ಜಗತ್ತಿನಾದ್ಯಂತ ಎಲ್ಲೆಡೆಯೂ ಕೊರೋನಾ ವೈರಸ್ ನ ಭಯ. ಚೀನಾದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡು ಮರಣ ಮೃದಂಗ ಬಾರಿಸಲು ಆರಂಭಿಸಿ ನಂತರ ಇತರ ದೇಶಕ್ಕೆ ತನ್ನ ಕಬಂಧಬಾಹು ಚಾಚಿತು ಎಂದು ಹೇಳಲಾಗುವ ಕೊರೋನಾ ವೈರಸ್ ಗೆ ಸುಮಾರು ಅರ್ಧ ಶತಮಾನದ ಇತಿಹಾಸವಿದೆ ಎಂಬ ಸುದ್ದಿ ಅಚ್ಚರಿಗೆ ಕಾರಣವಾಗಿದೆ.

‘ತರಂಗ’ ಎಂಬ ಕನ್ನಡ ಸಾಪ್ತಾಹಿಕ 1989ನೇ ಇಸವಿಯಲ್ಲಿ ಕೊರೋನಾ ಬಗೆಗಿನ ಮಾಹಿತಿಯನ್ನು ತನ್ನ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಇದೀಗ ಆ ಮಾಹಿತಿ ತುಣುಕು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆರೋಗ್ಯದ ಬಗ್ಗೆ ಲೇಖನ ಬಂದಾಗ ಆ ಲೇಖನಗಳನ್ನು ಜೋಪಾನವಾಗಿ ಸಂಗ್ರಹಿಸಿಡುವ ಹವ್ಯಾಸವುಳ್ಳ ಮುಕುಂದ ಚಿಂಪ್ಲೂಂಕರ್ ಎನ್ನುವವರು 31 ವರ್ಷಗಳ ಹಿಂದೆ ತಾವು ಸಂಗ್ರಹಿಸಿದ ಕೊರೋನಾ ವೈರಸ್ ಕುರಿತಾದ ಮಾಹಿತಿಯ ಲೇಖನವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಆದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಲೇಖನದಲ್ಲಿ ವೈರಸ್ ಗಳ ಕುರಿತಾದ ಮಾಹಿತಿ ಇದ್ದು, ಕೊರೋನಾ ವೈರಸ್ ಬಗ್ಗೆಯೂ ಮಾಹಿತಿ ನೀಡಲಾಗಿದೆ.








