ನವದೆಹಲಿ : ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾ ಭಾರತಿ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಸದ್ಯ ಅವರು ವೈದ್ಯರ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ಈ ಕುರಿತು ಉಮಾಭಾರತಿ ಅವರೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಚಲಿಸುತ್ತಿದ್ದ ಬಸ್ ನಲ್ಲಿ ಅತ್ಯಾಚಾರವೆಸಗಿ ಮಹಿಳೆಯನ್ನ ರಸ್ತೆಯಲ್ಲಿ ಎಸೆದ ಕಾಮುಕರು
ತಾವು ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕಿರುವುದು ಪತ್ತೆಯಾಗಿತ್ತು.
ಪ್ರಸ್ತುತ ತಾವು ಹೃಷಿಕೇಶದಲ್ಲಿದ್ದು, ಇಲ್ಲಿನ ವಂದೇ ಮಾತರಂ ಕುಂಜ್ ನಲ್ಲಿ ಸ್ವಯಂ ಕ್ಲಾರಂಟೈನ್ ಆಗಿದ್ದೇನೆ.
ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕು ದಿನಗಳ ಬಳಿಕ ಮತ್ತೆ ಟೆಸ್ಟ್ ಗೆ ಒಳಪಡುತ್ತೇನೆ.
ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.








