ಉಡುಪಿ, ಮೇ 17 : ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಮೇ 14ರಂದು ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಹಿಂತಿರುಗಿದ ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. 54 ವರ್ಷದ ಈ ವ್ಯಕ್ತಿಗೆ ಮೇ 13 ರಂದು ಹೃದಯಾಘಾತವಾಗಿದ್ದು, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಮಣಿಪಾಲ ಆಸ್ಪತ್ರೆಯ ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಮೇ 14ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆ ಗೆ ಕಳುಹಿಸಿ ಕೊಡಲಾಗಿತ್ತು. ಗಂಟಲ ದ್ರವ ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಉಡುಪಿ ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಸಾವಾಗಿದೆ.
ಮಲಗುವ ಮುನ್ನ ಹಾಲು ಕುಡಿಯುವುದರಿಂದ ಸಿಗುವ ಲಾಭಗಳು
ಮಲಗುವ ಮುನ್ನ ಹಾಲು ಕುಡಿಯುವುದರಿಂದ ಸಿಗುವ ಲಾಭಗಳು ಹೀಗಿದೆ... 1. ಉತ್ತಮ ನಿದ್ರೆ: ಹಾಲಿನಲ್ಲಿ ಇರುವ ಟ್ರಿಪ್ಟೊಫಾನ್, ಸಿರೊಟೋನಿನ್, ಮತ್ತು ಮೆಲಟೋನಿನ್ ನಿದ್ರೆಯನ್ನು ಉತ್ತೇಜಿಸುತ್ತವೆ. ಟ್ರಿಪ್ಟೊಫಾನ್ ಸಿರೊಟೋನಿನ್...