ಕೋಲ್ಕತ್ತಾ : ದೇಶದಲ್ಲಿ ಪ್ರತಿದಿನ ಹೆಮ್ಮಾರಿ ಕೊರೊನಾ ಸ್ಫೋಟ ಆಗುತ್ತಿದೆ. ಸಾವಿರಕ್ಕೂ ಹೆಚ್ಚು ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದರ ಮಧ್ಯೆ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ” ಕೊರೊನಾ ವೈರಸ್ ಅಂತ್ಯವಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯಕ್ರಮಗಳನ್ನು ಆರಂಭಿಸಿದೆ. ಅದರಂತೆ ಬಿಜೆಪಿ ಕೂಡ ಬುಧವಾರ ಹೂಗ್ಲಿಯಲ್ಲಿ ಬೃಹತ್ ರ್ಯಾಲಿಯನ್ನು ಏರ್ಪಡಿಸಿ ಶಕ್ತಿ ಪ್ರದರ್ಶನ ಮಾಡಿತ್ತು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ದಿಲೀಪ್ ಘೋಷ್, ಕೊರೊನಾದ ವೈರಸ್ ಅವಧಿ ಅಂತ್ಯವಾಗಿದೆ. ದೀದಿ ಅನತ್ಯವಾಗಿ ಲಾಕ್ ಡೌನ್ ಹೇರುತ್ತಿದ್ದು, ಇದರಿಂದ ಬಿಜೆಪಿ ಸಭೆ ಹಾಗೂ ರ್ಯಾಲಿಗಳನ್ನು ನಡೆಸಲು ಸಾಧ್ಯವಿಲ್ಲ ಎಂಬುವುದು ಅವರ ಉದ್ದೇಶವಾಗಿದೆ. ಆದರೆ ನಾವು ಎಲ್ಲಿಗೆ ಹೋದರೂ ಅದು ಸ್ವಯಂ ರ್ಯಾಲಿಯಾಗಿ ಬದಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದೆ. ಕೊರೊನಾ ಇಲ್ಲದಿದ್ದರೂ ಲಾಕ್ ಡೌನ್ ಮಾಡುವ ಮೂಲಕ ದೀದಿ ತಮ್ಮ ನಾಟಕವನ್ನು ಮುಂದುವರಿಸಿದ್ದಾರೆ. ಲಾಕ್ ಡೌನ್ ನೆಪದಲ್ಲಿ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ.
https://youtu.be/Sas9M3qL8NI








