ಧಾರವಾಡದಲ್ಲಿ ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿ Dharwad
ಧಾರವಾಡ : ಜಿಲ್ಲಿಯ ಹಾರೋಬೆಳವಡಿ ಗ್ರಾಮದಲ್ಲಿ ಹೆಮ್ಮಾರಿ ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.
ಹಾರೋಬೆಳವಡಿಯ ಕಡ್ಲಿ ಕುಟುಂಬದಲ್ಲಿ ಮೂರು ದಿನಗಳ ಹಿಂದೆ ಶಾಂತಮ್ಮ ಕಡ್ಲಿ (75) ಕೊರೊನಾದಿಂದಾಗಿ ಮೃತಪಟ್ಟಿದ್ದರು.
ಇಂದು ಅವರ ಇಬ್ಬರು ಪುತ್ರರಾದ ಕಲ್ಲಪ್ಪ ಕಡ್ಲಿ (49), ನಾಗನಗೌಡ ಕಡ್ಲಿ (42) ಕೂಡ ಕೊರೊನಾಗೆ ಬಲಿಯಾಗಿದ್ದಾರೆ.
ಇವರ ನಿಧನದಿಂದ ಮೂರೇ ದಿನದಲ್ಲಿ ಒಂದೇ ಕುಟುಂಬದವರು ಸಾವಾಗಿದ್ದಕ್ಕೆ ಇಡೀ ಗ್ರಾಮದಲ್ಲಿ ಆತಂಕ ಆವರಿಸಿದೆ.










