ಗಾನ ಗಾರುಡಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ಈ ಬಗ್ಗೆ ಅವರ ಪುತ್ರ ಎಸ್.ಪಿ ಚರಣ್ ಅವರು, “ಅಪ್ಪನಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂಬ ಮಾಹಿತಿ ನನ್ನಿಂದ ಹೇಳಲ್ಪಟ್ಟದ್ದಲ್ಲ. ವದಂತಿಗಳನ್ನು ಹರಡದಿರಿ, ವದಂತಿಗಳಿಗೆ ಕಿವಿ ಕೊಡದಿರಿ” ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‍ಬುಕ್ ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು “ಅಪ್ಪನಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂಬ ಮಾಹಿತಿ ನನ್ನಿಂದ ಹೇಳಲ್ಪಟ್ಟದ್ದಲ್ಲ. ವದಂತಿಗಳನ್ನು ಹರಡದಿರಿ, ವದಂತಿಗಳಿಗೆ ಕಿವಿ ಕೊಡದಿರಿ”. ಆಸ್ಪತ್ರೆಯಿಂದ ಎಸ್‍ಪಿಬಿಯ ಆರೋಗ್ಯ ಸ್ಥಿತಿಯ ಬಗ್ಗೆ ನೇರ ಮಾಹಿತಿ ಪಡೆಯುವ ಏಕೈಕ ವ್ಯಕ್ತಿ ನಾನು. . ‘ನಾನು ಸಾಮಾನ್ಯವಾಗಿ ಆಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಅಪ್ಪನವರ ಆರೋಗ್ಯ ಸ್ಥಿತಿಯ ಬಗೆಗೆ ಪೋಸ್ಟ್ ಮಾಡುತ್ತೇನೆ. ಆದರೆ ದುರದೃಷ್ಟವಶಾತ್, ನಾನು ಬೆಳಿಗ್ಗೆ ಒಂದು ಪೋಸ್ಟ್ ಹಾಕಲು ಒತ್ತಡದಲ್ಲಿದ್ದೆ”
ಇಂದು ಎಸ್‍ಪಿಬಿ ಕೊರೊನಾ ವೈರಸ್ ನೆಗೆಟಿವ್ ವರದಿ ಸಿಕ್ಕಿದೆ ಎನ್ನುವ ವದಂತಿ ಎಲ್ಲೆಡೆ ಹರಡುತ್ತಿದೆ. ಇದು ದುರದೃಷ್ಟಕರ. “ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಏನೇ ಆಗಿದ್ದರೂ ಆರೋಗ್ಯ) ಸ್ಥಿತಿ ಇನ್ನೂ ಹಾಗೆಯೇ ಇದೆ, ” ಎಂದು ಚರಣ್ ತಿಳಿಸಿದ್ದಾರೆ.








