ನನ್ನ ಜೀವ ಉಳಿಸಲು ವೈದ್ಯರು, ನರ್ಸ್ ಗಳು ತಮ್ಮ ಜೀವ ಪಣಕ್ಕಿಟ್ಟರು ಎಂದು ಮಂಗಳೂರಿನ ವೆನ್ಲಾಕ್ ನ ಕೊರೊನಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾದ ಸೋಂಕಿತ ವ್ಯಕ್ತಿ ಭಾವುಕರಾಗಿ ನುಡಿದರು.
ಕೊರೋನಾ ಸೋಂಕಿತನಾದ ನನ್ನನ್ನು ಪೊಲೀಸ್ ಇಲಾಖೆಯವರು ಪ್ರೀತಿಯಿಂದ ನೋಡಿಕೊಂಡರು. ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ನನ್ನ ಜೀವ ಉಳಿಸಲು ವೈದ್ಯರು, ಅಲ್ಲಿನ ನರ್ಸ್ ಗಳು ಬಹಳಷ್ಟು ಕಷ್ಟ ಪಟ್ಟರು, ಅವರ ಜೀವವನ್ನೇ ಪಣಕ್ಕಿಟ್ಟರು ಎಂದ ತೊಕ್ಕೊಟ್ಟು ಮೂಲದ ಗುಣಮುಖ ಕೊರೊನಾ ಸೋಂಕಿತ ವ್ಯಕ್ತಿ ಮುಂದೆ ಮಾತು ಮುಂದುವರಿಸಲಾಗದೆ ಗದ್ಗದಿತರಾದರು.
https://twitter.com/compolmlr/status/1252139190483107840?s=20
ಇವರು ಮಂಗಳೂರಿನ ವೆನ್ಲಾಕ್ ನ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ತೊಕ್ಕೊಟ್ಟು ಮೂಲದ ವ್ಯಕ್ತಿ ಕೊರೋನಾ ವಿರುದ್ಧ ಹೋರಾಟದಲ್ಲಿ ಜಯಗಳಿಸಿ ಗುಣಮುಖರಾಗಿ, ಮನೆಗೆ ಹಿಂತಿರುಗಿದ ಸಮಯದಲ್ಲಿ, ತೊಕ್ಕೊಟ್ಟು ಸೀಲ್ ಡೌನ್ ಪ್ರದೇಶವಾಗಿದ್ದರೂ ಸ್ಥಳೀಯರೆಲ್ಲರೂ ಚಪ್ಪಾಳೆ ಹೊಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊರೊನಾ ವಿರುದ್ಧ ಜಯಗಳಿಸಿದ ವ್ಯಕ್ತಿ ‘ ಖಾಯಿಲೆ ನೀಡುವುದು ಆ ಅಲ್ಲಾ… ಇನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನನಗೆ ಒಳ್ಳೆಯ ಚಿಕಿತ್ಸೆ ನೀಡಿದರು, ಆಗ್ಗಾಗೆ ಸಿಬ್ಬಂದಿಗಳು ಬಂದು ನನಗೆ ಯಾವುದೇ ಕುಂದುಕೊರತೆ ನೋಡಿಕೊಂಡರು. ಅವರು ಎಷ್ಟೊಂದು ಕಷ್ಟಪಡುತ್ತಾರೆ. ನಮ್ಮ ಜೀವವನ್ನು ಉಳಿಸಲು ಅಲ್ಲಿನ ಡಾಕ್ಟರ್, ನರ್ಸ್ ಗಳು ಎಷ್ಟೊಂದು ಕಷ್ಟ ಪಡುತ್ತಿದ್ದರು. ಪಿಪಿಟಿ ಕಿಟ್ ಧರಿಸಿ ಅವರು ಬೆವರುತ್ತಿದ್ದರು. ಆದರೆ ನಾನು ಕೊರೊನಾದಿಂದ ಸಾಯಬಾರದೆಂದು ನನ್ನ ಜೀವಕ್ಕಾಗಿ ಅವರ ಜೀವ ಪಣಕ್ಕಿಟ್ಟಿದ್ದರು’ ಎನ್ನುತ್ತಾ ಗದ್ಗದಿತರಾದರು.








