ಬೆಂಗಳೂರು : ನಟಿ. ಸಂಸದೆ ಸುಮಲತಾ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟ ಹಿನ್ನೆಲೆ ಹಿರಿಯ ನಟ ದೊಡ್ಡಣ್ಣ ಅವರಿಗೆ ಕೊರೊನಾ ಸೋಂಕಿನ ಭೀತಿ ಎದುರಾಗಿದೆ.
ನಟಿ, ಸಂಸದೆ ಸುಮಲತಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಈ ವಿಚಾರವನ್ನು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಹಿರಿಯನಟ ದೊಡ್ಡಣ್ಣ ಅವರಿಗೂ ಸೋಂಕಿನ ಆತಂಕ ಉಂಟಾಗಿದೆ. ಕಳೆದ ಗುರುವಾರವಷ್ಟೇ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸುಮಲತಾ ಅವರೊಂದಿಗೆ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸುಮಲತಾ ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ದೊಡ್ಡಣ್ಣ ಅವರಿಗೂ ಸೋಂಕು ಭೀತಿ ಎದುರಾಗಿದೆ. ಹೀಗಾಗಿ ಬೆಂಗಳೂರು ಉತ್ತರ ತಾಲೂಕಿನ ಚನ್ನನಾಯಕನಪಾಳ್ಯದಲ್ಲಿರುವ ನಿವಾಸದಲ್ಲಿ ದೊಡ್ಡಣ್ಣ ಹೋಂಕ್ವಾರಂಟೈನ್ ಆಗಿದ್ದಾರೆ.








