ಅಸ್ಸಾಂ : ಅಸ್ಸಾಂನಲ್ಲಿ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇಇರುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಒಟ್ಟು 8 ಮಂದಿ ಸಿಬ್ಬಂದಿಗಳು ಈಗಾಗಲೇ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಅಸ್ಸಾಂನ ಒಟ್ಟು 3,005 ಪೊಲೀಸ್ ಸಿಬ್ಬಂದಿಗಳ ಪೈಕಿ ಈಗಾಗಲೇ 2,274 ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಜಿ.ಪಿ.ಸಿಂಗ್ ಅವರು ಟ್ವೀಟ್ ಮಾಡಿದ್ದು, “ಆಗಸ್ಟ್ 18,ರ ವರೆಗೆ ಅಸ್ಸಾಂ ಪೊಲಿಸ್ ಇಲಾಖೆಯ 3005 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. 2274 ಜನರು ಚೇತರಿಸಿಕೊಂಡಿದ್ದು, ಎಂಟು ಸಹೋದ್ಯೋಗಿಗಳು ಇಲ್ಲಿಯವರೆಗೂ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.









