ಬೆಂಗಳೂರು ಮಂದಿಗೆ ಸಮಾಧಾನದ ಸಂಗತಿ : ಇಂದು 2,724 ಜನರಿಗೆ ಪಾಸಿಟಿವ್ bangalure
ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ.
ಬ್ಯಾಕ್ ಟು ಬ್ಯಾಕ್ ಲಾಕ್ ಡೌನ್ ವಿಸ್ತರಣೆಗಳಿಂದ ಬೇಸತ್ತಿರುವ ಮೆಟ್ರೊ ಮಂದಿಗೆ ಇದೀಗ ಒಂದಿಷ್ಟು ಸಿಹಿ ಸುದ್ದಿ ಸಿಕ್ಕಿದೆ.
ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 3 ಸಾವಿರಕ್ಕಿಂತ ಕಡಿಮೆಯಾಗಿದ್ದು, ಇಂದು 2,724 ಜನರಿಗೆ ಪಾಸಿಟಿವ್ ಬಂದಿದೆ.
ಬೊಮ್ಮನಹಳ್ಳಿಯಲ್ಲಿ 250, ದಾಸರಹಳ್ಳಿಯಲ್ಲಿ 93, ಪೂರ್ವ 384, ಮಹಾದೇವಪುರದಲ್ಲಿ 408, ಆರ್ಆರ್ ನಗರದಲ್ಲಿ 201,
ದಕ್ಷಿಣದಲ್ಲಿ 181, ಪಶ್ಚಿಮದಲ್ಲಿ 223, ಯಲಹಂಕ 230 ಸೋಂಕು ದೃಢಪಟ್ಟಿವೆ. ನಗರದಲ್ಲಿನ್ನೂ 1,31,179 ಸಕ್ರಿಯ ಪ್ರಕರಣಗಳಿವೆ.
ನಿನ್ನೆ ನಗರದಲ್ಲಿ 3,221 ಜನರಿಗೆ ಪಾಸಿಟಿವ್ ಬಂದಿದ್ದು, 206 ಮಂದಿ ಮೃತಪಟ್ಟಿದ್ದರು.









