ಬೆಂಗಳೂರು: ಬ್ರಿಟನ್‍ನಿಂದ ಭಾರತಕ್ಕೆ ವಿಮಾನ ಸಂಚಾರ ಆರಂಭವಾಗುತ್ತಿದ್ದಂತೆ ಬೆಂಗಳೂರಿಗೆ ಬಂದಿಳಿದ 289 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಬೆಳಿಗ್ಗೆ 4.30ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 289 ಮಂದಿಯಿದ್ದ ವಿಮಾನ ಬಂದಿದೆ. ವಿಮಾನದಲ್ಲಿ 145 ಮಂದಿ ಪುರುಷರು, 96 ಮಹಿಳೆಯರು ಹಾಗೂ 32 ಮಕ್ಕಳು ಹಾಗೂ 16 ಮಂದಿ ವಿಮಾನ ಸಿಬ್ಬಂದಿ ಇದ್ದರು. ಬ್ರಿಟನ್‍ನಿಂದ ಬಂದ ಪ್ರತಿಯೊಬ್ಬಯೊಬ್ಬರಿಗೂ ಕೆಂಪೇಗೌಡ ಏರ್ ಪೋರ್ಟ್‍ನಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು.

ಸತತ 5 ಗಂಟೆಗಳ ಕಾಲ ಎಲ್ಲಾ 289 ಮಂದಿ ಪ್ರಯಾಣಿಕರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಆರ್‍ಟಿಪಿಸಿಆರ್ ಟೆಸ್ಟ್‍ನಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಉಳಿದವರಿಗೆ ನೆಗೆಟಿವ್ ಬಂದಿದೆ. ಈ ವಿಚಾರವನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಖಚಿತಪಡಿಸಿದ್ದಾರೆ.

ನೆಗೆಟಿವ್ ಬಂದವರ ಕೈಗೆ ಸ್ಯಾಂಪಿಂಗ್ ಸೀಲ್ ಹಾಕಿ 14 ದಿನ ಹೋಂಕ್ವಾರಂಟೈನ್ ಆಗುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಬಂದವರನ್ನು ಸಾಂಸ್ಥಿಕ ಐಸೋಲೇಶನ್‍ಗೆ ಕಳಿಸಲಾಗಿದೆ. ಅಲ್ಲಿ ಮತ್ತೊಮ್ಮೆ ಜೆನೆಟಿಕ್ ಟೆಸ್ಟ್ ಮಾಡಿಸಲು ಆರೋಗ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಅವರಿಗೆ ರೂಪಾಂತರ ಕೊರೊನಾ ವೈರಸ್ ಸೋಂಕು ಇದೆಯಾ ಇಲ್ಲವಾ ಎಂಬುದನ್ನು ದೃಢಪಡಿಸಿಕೊಂಡ ಬಳಿಕ ಮನೆಗೆ ಕಳಿಸಲಾಗುತ್ತದೆ.
ಟ್ರ್ಯಾಕಿಂಗ್‍ಗೆ ಹೊಸ ಐಡಿಯಾ..!
ಬ್ರಿಟನ್‍ನಿಂದ ಬಂದು ನಾಪತ್ತೆಯಾಗುವುದನ್ನು ತಡೆಯಲು ಆರೋಗ್ಯ ಇಲಾಖೆ ಹೊಸ ಐಡಿಯಾ ಮಾಡಿದೆ. ಬ್ರಿಟನ್‍ನಿಂದ ಬಂದ ಪ್ರತಿಯೊಬ್ಬರ ಪಕ್ಕಾ ವಿಳಾಸ ಪಡೆದು, ಎಲ್ಲರಿಗೂ ಕರ್ನಾಟಕದ ಮೊಬೈಲ್ ಸಿಮ್ ನೀಡಲಾಗಿದೆ. ಸಿಮ್ ಆಕ್ಟಿವೇಟ್ ಮಾಡಿಸಿಕೊಂಡು ಒಟಿಪಿ ಪಡೆದು ನಂತರ ಮನೆಗಳಿಗೆ ಕಳಿಸಲಾಗುತ್ತಿದೆ. ಇದರಿಂದ ರಾಜ್ಯಕ್ಕೆ ಬಂದ ಮೇಲೆ ನಾಪತ್ತೆಯಾಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಇತ್ತೀಚೆಗೆ ಬ್ರಿಟನ್‍ನಿಂದ ಬಂದ ನೂರಕ್ಕೂ ಹೆಚ್ಚು ಮಂದಿ ಸುಳ್ಳು ವಿಳಾಸ ನೀಡಿ ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೂ ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರವೇ ಮೊಬೈಲ್ ಸಿಮ್ ನೀಡಿ ಕಳಿಸಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







