ಕಟ್ಟಪ್ಪ ಸತ್ಯರಾಜ್‍ಗೆ ಕೊರೊನಾ ಪಾಸಿಟಿವ್ Saaksha Tv
ಚನೈ: ಕಾಲಿವುಡ್ ನ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರ ಬಹಳಷ್ಟು ಪ್ರಖ್ಯಾತಿ ಪಡೆದಿತ್ತು. ಈ ಪಾತ್ರವನ್ನು ನಿರ್ವಹಿಸದ ಕಾಲಿವುಡ್ ಸ್ಟಾರ್ ನಟ ಸತ್ಯರಾಜ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು ಇದೀಗ ಅವರನ್ನು ಚೆನ್ನೈನ ಅಮಿಂಜಿಕ್ಕರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ತಿಳಿದು ಬಂದಿಲ್ಲ.
ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಇತ್ತೀಚೆಗಷ್ಟೇ ಟಾಲಿವುಡ್ ನಟ ಮಹೇಶ್ ಬಾಬು, ಸಂಗೀತಾ ಸಂಯೋಜಕ ಥಮನ್ ಮತ್ತು ನಟಿ ತ್ರಿಶಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಕೊರೊನಾ ದೃಢಪಟ್ಟಿತ್ತು.









