KSRTC 115 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ Saaksha Tv
ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈಗ KSRTC ಯ 115 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು KSRTC ಡಿಟಿಓ ದೀನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
KSRTC ಸಿಬ್ಬಂದಿಗಳು ಸಾರ್ವಜನಿಕರ ಮಧ್ಯೆ ಕೆಲಸ ಮಾಡುತ್ತಿದ್ದ ನಿಟ್ಟಿನಲ್ಲಿ ಟೆಸ್ಟ್ ಮಾಡಿಸಲಾಗಿತ್ತು. ಆಗ 115 ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಕೆ.ಆರ್.ಪೇಟೆಯ 42 ಸಿಬ್ಬಂದಿಗಳಿಗೆ, ಮಂಡ್ಯದ 7, ಮದ್ದೂರಿನ 12, ಮಳವಳ್ಳಿಯ 8, ಕೆ.ಆರ್.ಪೇಟೆಯ 42, ನಾಗಮಂಗಲದ 6, ಪಾಂಡವಪುರದ 20, ವಿಭಾಗಿಯಾ ತನಿಖಾ ದಳ 1. ವಿಭಾಗಿಯಾ ಸಿಬ್ಬಂದಿ 19 ಜನರಿಗೆ ಕೊರೊನಾ ದೃಡಪಟ್ಟಿದೆ ಪಾಸಿಟಿವ್ ಬಂದಿರುವರು ಹೋ ಐಶುಲೇಸನ್ ಆಗಿದ್ದಾರೆ.
ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದಂತೆ ಸಧ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಾರದ ರಜೆ, ಬೇರೆ ಡಿಪೋಯಿಂದ ಸಪೋರ್ಟ್ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇವೆ. ಅಲ್ಲದೇ ಡಿಫೋ, ಬಸ್ ನಿಲ್ದಾಣ ಹಾಗೂ ಬಸ್ ಗಳನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ಸಧ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮಾಸ್ಕ್, ಹಾಗೂ ಸ್ಯಾನಿಟೈಜ್ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜನರಿಗೂ ಸಹ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ನಾವು ಕೊರೊನಾ ನಿಯಮ ಪಾಲನೆ ಮಾಡುವ ಮೂಲಕ ಕಾರ್ಯಾ ನಿರ್ವಹಿಸುತ್ತಿದ್ದೇವೆ. ನೀವು ಕೂಡಾ ಸಹ ಕೊರೊನಾ ನಿಯಮ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡರು.









