ಬೆಂಗಳೂರು: ಜಗತ್ತಿನ ನಿದ್ದೆಗೆಡಿಸಿರುವ ಹೊಸ ತಳಿಯ ಲಂಡನ್ ಕೊರೊನಾ ವೈರಸ್ ಕರ್ನಾಟಕ, ಅದರಲ್ಲೂ ರಾಜಧಾನಿ ಬೆಂಗಳೂರಿಗೆ ವಕ್ಕರಿಸಿತಾ ಎಂಬ ಆತಂಕ ಶುರುವಾಗಿದೆ.
ಇದಕ್ಕೆ ಕಾರಣ ಲಂಡನ್‍ನಿಂದ ವಾಪಸ್ಸಾದ ತಾಯಿ, ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಡಿಸೆಂಬರ್ 19ರಂದು ಲಂಡನ್‍ನಿಂದ ಬೆಂಗಳೂರಿಗೆ ಬಂದ ವಸಂತಪುರದ 36 ವರ್ಷದ ತಾಯಿ, 6 ವರ್ಷದ ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಬ್ಬರೂ ಬೆಂಗಳೂರಿಗೆ ಬರುತ್ತಿದ್ದಂತೆ ಆರ್‍ಟಿಸಿಪಿಆರ್ ಪರೀಕ್ಷೆ ನಡೆಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಮತ್ತೆ ಇಬ್ಬರ ಗಂಟಲು ಮಾದರಿಯನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಪುಣೆಯ ಲ್ಯಾಬೋರೇಟರಿಗೆ ಕಳಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕೋವಿಡ್-19 ಅಥವಾ ಹೊಸ ತಳಿಯ ಲಂಡನ್ ವೈರಸ್ಸಾ ಎಂಬುದು ಖಚಿತವಾಗಲಿದೆ.
ಇದೇ ವೇಳೆ, ಇಂಡನ್‍ನಿಂದ ಬಂದ 38 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಇವರಲ್ಲಿ ಈ ಇಬ್ಬರು ತಾಯಿ-ಮಗಳು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಅಅಧಿಕಾರಿಗಳು, ಲಂಡನ್‍ನಿಂದ ಬಂದವರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಜತೆಗೆ ನಿನ್ನೆ ಲಂಡನ್‍ನಿಂದ ಬಂದ 38 ಪ್ರಯಾಣಿಕರ ಪೈಕಿ 11 ಮಂದಿ ವಿಜಯಪುರಕ್ಕೆ ತೆರಳಿದ್ದು, ಉಳಿದವರ ವಿಳಾಸ ಪತ್ತೆ ಚುರುಕು ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ.
ಮತ್ತೊಂದೆಡೆ, ಲಂಡನ್‍ನಿಂದ ಬಂದ ಬೆಳಗಾವಿ, ತುಮಕೂರಿನ ಮಹಿಳೆಯರಿಗೂ ಆರೋಗ್ಯ ಇಲಾಖೆ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಗಾಗಿ ಜಿಲ್ಲಾಡಳಿತಗಳು ಎದುರು ನೋಡುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel