ಬೆಂಗಳೂರಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 3ಕ್ಕೆ ಇಳಿಕೆ Corona
ಬೆಂಗಳೂರು : ನಗರದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಇಂದು 1,297 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಸದ್ಯ ಪಾಸಿಟಿವಿಟಿ ದರ ಶೇ. 3.02ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 1.88 ಇದೆ.
ನಗರದ ಬೊಮ್ಮನಹಳ್ಳಿಯಲ್ಲಿ 130, ದಾಸರಹಳ್ಳಿ 60, ಬೆಂಗಳೂರು ಪೂರ್ವ 173, ಮಹಾದೇವಪುರ 184, ಆರ್.ಆರ್. ನಗರ 96,
ಬೆಂಗಳೂರು ದಕ್ಷಿಣ 131, ಬೆಂಗಳೂರು ಪಶ್ಚಿಮ 96 ಹಾಗೂ ಯಲಹಂಕದ 59 ಜನರಲ್ಲಿ ಸೋಂಕು ಪತ್ತೆಯಾಗಿದೆ.
ನಗರದಲ್ಲಿ ಇನ್ನೂ 85,044 ಸಕ್ರಿಯ ಪ್ರಕರಣಗಳಿವೆ. ನಿನ್ನೆ 303 ಮಂದಿ ತೀವ್ರ ನಿಗಾ ಘಟಕದಲ್ಲಿ ಹಾಗೂ 440 ಮಂದಿ ಐಸಿಯು+ವೆಂಟಿಲೇಟರ್?ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ( ಜೂನ್ 14ರಂದು) ನಗರದಲ್ಲಿ 1,470 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. 12 ಮಂದಿ ಸೋಂಕಿತರು ಮೃತಪಟ್ಟಿದ್ದರು.










