ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಮಹಾ ಸ್ಪೋಟವಾಗಿದೆ. ಕೊರೊನಾ ರಣಕೇಕೆ ಹಾಕಿದೆ. ಇಂದು ಬಳ್ಳಾರಿಯಲ್ಲಿ ಮತ್ತೆ ಹೊಸ 34 ಪ್ರಕರಣಗಳು ಪತ್ತೆಯಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಇಂದು ಒಟ್ಟು 34 ಕೇಸ್ ನಲ್ಲಿ ಜಿಂದಾಲ್ ನ 27 ಪ್ರಕರಣಗಳು ದಾಖಲಾಗಿವೆ. ಐವರು ಸೋಂಕಿತರಿಗೆ ಮುಂಬೈನ್ ಲಿಂಕ್ ಇದೆ. ಒಂದು ಬಳ್ಳಾರಿ, ಇನ್ನೊಂದು ಹೊಸಪೇಟೆಯ ವ್ಯಕ್ತಿಗೆ ಸೋಂಕು ಧೃಡವಾಗಿದೆ. ನಿನ್ನೆ 33 ಸೋಂಕಿತರಿದ್ದ ಜಿಂದಾಲ್ ನಲ್ಲಿ ಇಂದು ಮತ್ತೊಮ್ಮೆ ಕೊರೊನಾ ಕಾಣಿಸಿಕೊಂಡಿದೆ.
ಜಿಂದಾಲ್ ನಲ್ಲಿ ಇಂದಿನ 27 ಹೊಸ ಕೇಸ್ ಸೇರಿ 60 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 128 ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.









