ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 30,773 ಕೇಸ್ ಪತ್ತೆ Corona Report saaksha tv
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿನ ಏರಿಳಿತ ಮುಂದುವರೆದಿದೆ.
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಹೊಸದಾಗಿ 30,773 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಇದೇ ಅವಧಿಯಲ್ಲಿ 309 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಾದ್ಯಂತ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,34,48,163 ಕ್ಕೇರಿದೆ. ಮೃತರ ಸಂಖ್ಯೆ 4,44,838 ಕ್ಕೇರಿದೆ.
ಇನ್ನು ದೇಶದಲ್ಲಿ 38,945 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಮೂಲಕ ಒಟ್ಟು 3,26,71,167 ಜನರು ಹೆಮ್ಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದಲ್ಲೀಗ 3,32,168 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.









