Corona Report : ನಿನ್ನೆ 48,786 ಕೇಸ್ ಪತ್ತೆ, 61,588 ಮಂದಿ ಡಿಸ್ಚಾರ್ಜ್
ನವದೆಹಲಿ : ಭಾತರದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 48,786 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 48,786 ಕೇಸ್ ಗಳು ದಾಖಲಾಗಿದ್ದರೆ 61,588 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 3,04,11,634ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 2,94,88,918 ಮಂದಿ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ.
ಇತ್ತ ನಿಧಾನವಾಗಿ ಸಾವಿನ ಸಂಖ್ಯೆಯೂ ತಗ್ಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1,005 ಜನರು ಪ್ರಾಣ ಬಿಟ್ಟಿದ್ದಾರೆ.
ಇದರೊಂದಿಗೆ ಮೃತರ ಸಂಖ್ಯೆ 3,99,459 ಕ್ಕೆ ಏರಿಕೆಯಾಗಿದೆ. ಪ್ರಸ್ತುತ 5,23,257 ಪ್ರಕರಣಗಳು ಸಕ್ರಿಯವಾಗಿದೆ.
ಇನ್ನು ದೇಶಾದ್ಯಂತ ಈವರೆಗೆ ಲಸಿಕೆಯ 33,57,16,019 ಕೋಟಿಗೂ ಅಧಿಕ ಡೋಸ್ ಗಳನ್ನು ನೀಡಲಾಗಿದೆ.









