ಕೊರೊನಾ ರಿಪೋರ್ಟ್ Corona Report : ಕಳೆದ 24 ಗಂಟೆಯಲ್ಲಿ 62,224 ಕೇಸ್ ಪತ್ತೆ
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೆ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗಿದ್ದು, ಕಳೆದ 24ಗಂಟೆಯಲ್ಲಿ 62,224 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 62,224 ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು, 2,542 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,96ಕೋಟಿಗೆ ಏರಿಕೆಯಾಗಿದೆ. ಕಿಲ್ಲರ್ ಕೊರೊನಾಗೆ ಕೊನೆಯುಸಿರೆಳೆದವರ ಸಂಖ್ಯೆ 3,79,573ಕ್ಕೆ ಏರಿಕೆಯಾಗಿದೆ.
ಇನ್ನು ದೇವರನಾಡು ಕೇರಳದಲ್ಲಿ ಅತಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ನಿನ್ನೆ 12,246 ಕೇಸ್ ಗಳು ಪತ್ತೆಯಾಗಿವೆ. ತಮಿಳುನಾಡು 11,805, ಮಹಾರಾಷ್ಟ್ರ 7652, ಆಂಧ್ರಪ್ರದೇಶ 5,741 ಹಾಗೂ ಕರ್ನಾಟಕದಲ್ಲಿ 5041 ಪ್ರಕರಣಗಳು ಪತ್ತೆಯಾಗಿದೆ.










