ಮಹಾಮಾರಿ ಕೊರೊನಾ ಸೋಂಕು ವಿಶ್ವದಾದ್ಯಂತ ಮರಣಮೃದಂಗವನ್ನು ಬಾರಿಸುತ್ತಿದೆ. ಈ ಸಾಂಕ್ರಾಮಿಕ ಹೆಮ್ಮಾರಿಯ ಹೊಡೆತಕ್ಕೆ ಪ್ರಪಂಚವೇ ತತ್ತರಿಸಿ ಹೋಗಿದೆ. ಇದರ ಕರಿನೆರಳು ಎಲ್ಲಾ ಇಂಡಸ್ಟ್ರೀಗಳ ಮೇಲೂ ಬಿದ್ದಿದ್ದು, ಷೇರು ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತಿವೆ. ಇನ್ನು ಕೊರೊನಾ ಪರಿಣಾಮ ವಿಶ್ವದಾದ್ಯಂತ 2.5 ಕೋಟಿ ಜನ ನಿರುದ್ಯೋಗಿಗಳಾಲಿದ್ದಾರೆ ಎಂಬ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.
ಹೌದು…! ಅಚ್ಚರಿ ಎನಿಸಿದರೂ ಇದು ಸತ್ಯ. ಈ ಕೊರೊನಾಸುರ ಇದುವರೆಗೂ 2.5ಕೋಟಿ ಜನರ ಕೆಲಸವನ್ನು ನುಂಗಿದ್ದಿದ್ದಾನೆ. ಇದು ಕೇವಲ ದಾಖಲೆಗಳ ಪ್ರಕಾರ ಮಾತ್ರ. ಆದ್ರೆ ಕೊರೊನಾದಿಂದ ಪ್ರತ್ಯಕ್ಷ ಹಾಗೂಪರೋಕ್ಷವಾಗಿ ಈ ಅಂಕಿಅಂಶಗಳಿಂತಲೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳ ಬಾಳನ್ನು ಈ ಕೊರೊನಾ ಸಂಕಷ್ಟಕ್ಕೆ ನೂಕಿದೆ ಎಂದರೆ ತಪ್ಪಾಗಲಾರದು.
ಒಟ್ಟಾರೆ ಸದ್ಯ ವಿಶ್ವಸಂಸ್ಥೆಯ ವರದಿ ಪ್ರಕಾರ ವಿಶ್ವದಾದ್ಯಂತ 2.5 ಕೋಟಿ ಜನರು ಕೊರೊನಾದಿಂದ ನಿರುದ್ಯೋಗಿಗಳಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಾರ್ಮಿಕರು ರೂ.251 ಲಕ್ಷ ಕೋಟಿ ಆದಾಯ ಕಳೆದುಕೊಂಡು ನಷ್ಟ ಅನುಭವಿಸಲಿದ್ದಾರೆಂದು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಕಾರ್ಮಿಕ ಸಂಘಟನೆ ಎಚ್ಚರಿಸಿದೆ.