ಲಾಕ್ ಡೌನ್ ಹಿನ್ನೆಲೆ ಇಷ್ಟುದಿನ ಮನೆಯಲ್ಲೇ ಇದ್ದ ಟೀಂ ಇಂಡಿಯಾದ ಆಟಗಾರರು, ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಮೈದಾನಕ್ಕೀಳಿದು ಪ್ರಾಕ್ಟೀಸ್ ಶುರು ಮಾಡಲು ಮುಂದಾಗಿದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ, ಇಶಾಂತ್ ಶರ್ಮಾ ಸೇರಿದಂತೆ ಇನ್ನಿತರ ಆಟಗಾರರು ಈಗಾಗಲೇ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಇನ್ನು ಇಷ್ಟು ದಿನ ಮನೆಯಲ್ಲೇ ಇದ್ದ ಬ್ಯೂ ಪ್ಯಾಂಟರ್ಸ್ ಗಾಗಿ ಬಿಸಿಸಿಐ ಕೂಡ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲಿದೆ. ಧರ್ಮಾಶಾಲಾ ಅಥವಾ ಬೆಂಗಳೂರಿನಲ್ಲಿ ಕ್ಯಾಂಪ್ ನಡೆಸುವ ಸಾಧ್ಯತೆ ಇದೆ.
ಆದ್ರೆ ಇದಕ್ಕೂ ಮುನ್ನಾ ಬಿಸಿಸಿಐ, ಟೀಂ ಇಂಡಿಯಾದ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಬಿಸಿಸಿಐ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೊರೊನಾ ಭೀತಿ ಹಿನ್ನೆಲೆ ಈಗಾಗಲೇ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ತಮ್ಮ ಆಟಗಾರರಿಗೆ ಕೊರೊನಾ ಟೆಸ್ಟ್ ನಡೆಸಿವೆ. ಇತ್ತೀಚಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ, ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಿತ್ತು.