ಬೀದರ್ : ಕೊನೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪರೀಕ್ಷಾ ಲ್ಯಾಬ್ ಉದ್ಘಾಟನೆಗೊಂಡಿದೆ. ಬ್ರಿಮ್ಸ್ ನೂತನ ಕಟ್ಟಡಲ್ಲಿ ಕೋವಿಡ್ ಲ್ಯಾಬ್ ಉದ್ಘಾಟನೆಯನ್ನು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಮಾಡಿದರು.
ಕೊರೊನಾ ಸೋಂಕು ಹರಡುವಿಕೆಯ ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ಲ್ಯಾಬ್ ಇರಲಿಲ್ಲ. ಕೋವಿಡ್ 19 ಪರೀಕ್ಷೆಗೆ ಒಳಪಡಿಸಬೇಕಾದರೆ ಬೆಂಗಳೂರು ಹಾಗೂ ಕಲಬುರ್ಗಿಗೆ ಹೋಗಿ ಬರಬೇಕಿತ್ತು. ಇದರಿಂದಾಗಿ ಕೋವಿಡ್ ತಪಾಸಣೆಯ ವರದಿ ಸಿಗಬೇಕಾದರೆ ಸಮಯ ವ್ಯರ್ಥವಾಗುತ್ತಿತ್ತು.
ಇನ್ನೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜನರ ಒತ್ತಾಯಕ್ಕೆ ಮಣಿದ ಸರ್ಕಾರದಿಂದ ಕೋವಿಡ್ ಲ್ಯಾಬ್ ಸ್ಥಾಪನೆಗೆ ಅನುಮತಿ ದೊರಕಿತ್ತು. ಇದೀಗ ಲ್ಯಾಬ್ ಲೊಕಾರ್ಪಣೆಗೊಂಡಿದೆ.








