ನವದೆಹಲಿ: ದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರ ಟೆಸ್ಟ್ ರಿಪೋರ್ಟ್ ಪಡೆಯುವುದೇ ಸರ್ಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ರಿಪೋರ್ಟ್ಗಾಗಿ ಸೋಂಕಿನ ಲಕ್ಷಣ ಇರುವವರೂ ವಾರಗಟ್ಟಲೆ ಕಾಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಈ ಸಮಸ್ಯೆಗೆ ಪರಿಹಾರ ನೀಡಲು ಕೊರಿಯಾ ಮೂಲದ ಕಂಪನಿಯೊಂದು ಮುಂದೆ ಬಂದಿದೆ. ಆಂಟಿಜೆನ್ ಕಿಟ್‌ಗಳ ಮೂಲಕ ಸ್ಯಾಂಪಲ್ ಪಡೆದ ಅರ್ಧ ಗಂಟೆಯಲ್ಲಿ ಕೊರೊನಾ ರಿಸಲ್ಟ್ ಕೊಡಬಹುದು ಎಂದು ಭರವಸೆ ನೀಡಿದೆ. ಈ ಕಿಟ್ ಬಳಕೆಗೆ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಒಪ್ಪಿಗೆ ಸೂಚಿಸಿವೆ.
ಕೊರೊನಾ ಪತ್ತೆಗೆ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಪಾಸಿಟಿವ್ ಇದೆಯೋ, ನೆಗೆಟಿವ್ ಇದೆಯೋ ಎಂದು ಮೊದಲು ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ಪಾಸಿಟಿವ್ ಎಂದು ಬಂದರೆ, ಪಾಸಿಟಿವ್ ಬಂದವರಿಗೆ ಮುಂದಿನ ಹಂತದ ಟೆಸ್ಟ್ಗಳನ್ನು ನಡೆಸಲಾಗುತ್ತದೆ. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಪರೀಕ್ಷೆ ನಡೆಸಬಹುದು ಹಾಗೂ ಸಾಮಾನ್ಯ ಶೀತ-ಜ್ವರ ಇದ್ದವರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಜೊತೆಗೆ ರ‍್ಯಾಂಡಮ್ ಪರೀಕ್ಷೆಗಳಿಗೆ ಆಂಟಿಜೆನ್ ಟೆಸ್ಟ್ ಸಹಾಯವಾಗಲಿದೆ ಎಂದು ಐಸಿಎಂಆರ್ ತಿಳಿಸಿದೆ.
ಅಂಟಿಜೆನ್ ಕಿಟ್ ಹೇಗೆ ಕೆಲಸ ಮಾಡುತ್ತೆ..!
ಅಂಟಿಜೆನ್ ಕಿಟ್ ವ್ಯಕ್ತಿಯ ಮೂಗಿನಿಂದಲೇ ನೇರವಾಗಿ ಸ್ಯಾಂಪಲ್ ಪಡೆಯುತ್ತದೆ. ಸಾಮಾನ್ಯ ಮಾದರಿಯಲ್ಲಿ ಲ್ಯಾಬ್ ಸಿಬ್ಬಂದಿ ಗಂಟಲಿನ ಸ್ವ್ಯಾಬ್ ಮಾದರಿಯನ್ನು ತೆಗೆದು ಡಬ್ಬಿಯಲ್ಲಿ ಹಾಕಿ ನಂತರ ಪರೀಕ್ಷೆಗೆ ಒಳಪಡಿಸುತ್ತಾರೆ. ಆದರೆ, ಈ ಆಂಟಿಜೆನ್ ಕಿಟ್, ರಕ್ತ ಪಡೆಯುವ ಹಾಗೆ ವ್ಯಕ್ತಿ ಅಥವಾ ಸೋಂಕಿತರ ಮೂಗಿನಿಂದ ನೇರವಾಗಿ ಸ್ಯಾಂಪಲ್ ಪಡೆಯುತ್ತದೆ. ಹೀಗಾಗಿ ಕಫ ಅಥವಾ ಗಂಟಲಿನ ಮಾದರಿ ಪಡೆಯುವ ಅಗತ್ಯ ಬರುವುದಿಲ್ಲ. ಪಡೆದ ಸ್ಯಾಂಪಲ್ ವೈರಲ್ ಬಫರ್ ಟ್ಯೂಬ್‌ಗಳ ಮೂಲಕ ಸಾಗುತ್ತದೆ. ಅಲ್ಲಿ ಬಂದ ಸ್ಯಾಂಪಲ್‌ನ 2-3 ಹನಿಯನ್ನು ಟೆಸ್ಟ್ ಸ್ಟ್ರಿಪ್ ಮೇಲೆ ಹಾಕಲಾಗುತ್ತದೆ. ಸಾಮಾನ್ಯ ಪ್ರೆಗ್ನೆನ್ಸಿ ಟೆಸ್ಟ್ಗಳಲ್ಲಿ ಬಳಸುವ ಕ್ರಮವನ್ನೇ ಅಳವಡಿಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಕೊರೊನಾ ಟೆಸ್ಟ್÷ಮಾಡುವ ಅಂಟಿಜೆನ್ ಕಿಟ್‌ಗಳು ಅರ್ಧ ಗಂಟೆಯೊಳಗೆ ರಿಸಲ್ಟ್ ಕೊಡುತ್ತದೆ ಎಂದು ಕೊರಿಯಾ ಕಂಪನಿ ತಿಳಿಸಿದೆ.