ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1694 ಮಂದಿಗೆ ಕೊರೊನಾ
ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆಯ ಅವಧಿಯಲ್ಲಿ 1,694 ಮಂದಿಗೆ ಕೊರೋನ ವೈರಸ್ ಸೋಂಕು ಪತ್ತೆಯಾಗಿ ಹೊಸ ದಾಖಲೆ ಬರೆದಿದ್ದು, ಈ ಮೂಲಕ ಒಟ್ಟು ಸೋಂಕಿತರ ಒಟ್ಟು 19,710 ಕ್ಕೆ ಏರಿಕೆಯಾಗಿದೆ.
ಕೊರೋನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 21 ಮಂದಿ ಬಲಿಯಾಗಿದ್ದು, ಬೆಂಗಳೂರು ನಗರ 5, ವಿಜಯಪುರ 2, ಕಲಬುರಗಿ 3, ಚಿಕ್ಕಬಳ್ಳಾಪುರ 3, ಶಿವಮೊಗ್ಗ 2, ಬಳ್ಳಾರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೀದರ್, ದಾವಣಗೆರೆ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 1 ಒಂದು ಸಾವು ಸಂಭವಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 293ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬೆಂಗಳೂರು ನಗರ 994, ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24, ಶಿವಮೊಗ್ಗ 23, ಗದಗ 19, ಉಡುಪಿ 16, ಕೊಡಗು 16, ಯಾದಗಿರಿ 14, ಹಾಸನ 13, ಬೆಳಗಾವಿ 13, ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ಉತ್ತರ ಕನ್ನಡ ಮತ್ತು ದಾವಣಗೆರೆ ತಲಾ 5, ವಿಜಯಪುರ ಮತ್ತು ಕೊಪ್ಪಳದಲ್ಲಿ ತಲಾ 4, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 3, ಹಾವೇರಿಯಲ್ಲಿ 1 ಕೊರೊನಾ ಪ್ರಕರಣಗಳು ದಾಖಲಾಗಿದೆ.








