ಕೊರೊನಾ ಅಪ್ ಡೇಟ್ ; ರಾಜ್ಯದಲ್ಲಿರುವ ಸಕ್ರಿಯ ಕೊರೊನಾ ಕೇಸ್ ಗಳೆಷ್ಟು ಗೊತ್ತಾ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಸೋಮವಾರ 29,744 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 201 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,68,945 ಕ್ಕೆ ಏರಿಕೆ ಕಂಡಿದೆ.
ಈ ಪೈಕಿ ರಾಜ್ಯದಲ್ಲಿನ್ನೂ 2,81,042 ಸಕ್ರಿಯ ಪ್ರಕರಣಗಳಿವೆ.ಇದರಲ್ಲಿ ಸದ್ಯ 1815 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈವರೆಗೂ ರಾಜ್ಯದಲ್ಲಿ 10,73,257 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಇಲ್ಲಿಯವರೆಗೆ 14,627 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.










