ಉಪವಾಸವಿದ್ದೂ corona ವಾಕ್ಸಿಸ್ ಪಡೆದುಕೊಳ್ಳಬಹುದಾ..?
ಹೈದರಾಬಾದ್ : ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ.
ಮುಸ್ಲಿಮರು ಈ ತಿಂಗಳಲ್ಲಿ ಉಪವಾಸಇರಲಿದ್ದು, ವ್ಯಾಕ್ಸಿನ್ ಪಡೆದುಕೊಳ್ಳಬಹುದಾ ಎಂಬ ಸಂಶಯಕ್ಕೆ ಹೈದರಾಬಾದ್ ಮೂಲಕ ದಾರುಲ್ ಇಫ್ತಾ ಸಂಸ್ಥೆ ಸ್ಪಷ್ಟನೆ ನೀಡಿದೆ.
ರಂಜಾನ್ ಉಪವಾಸದಲ್ಲಿದ್ದರೂ ಕೋವಿಡ್-19 ಲಸಿಕೆ ಯನ್ನು ತೆಗೆದುಕೊಳ್ಳಬಹುದು ಎಂದು ದಾರುಲ್ ಇಫ್ತಾ ಮುಸ್ಲಿಮರಿಗೆ ಸಲಹೆ (ಫತ್ವಾ) ನೀಡಿದೆ.
ವ್ಯಾಕ್ಸಿನ್ ಗಂಟಲು ಮುಖಾಂತರ ಲಸಿಕೆ ದೇಹದೊಳಗೆ ಹೋಗುವುದಿಲ್ಲ. ಇದರಿಂದ ಉಪವಾಸ ದೀಕ್ಷೆಗೆ ಅಡ್ಡಿಯಾಗುವುದಿಲ್ಲ.
ಯಾವುದೇ ಸಂಶಯವಿಲ್ಲ ಲಸಿಕೆಯನ್ನ ಪಡೆಯಬಹುದೆಂದು ತಿಳಿಸಿದೆ.
ಇದಲ್ಲದೆ ಒಂದು ವೇಳೆ ಲಸಿಕೆ ತೆಗೆದುಕೊಂಡ ಬಳಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೇ ಉಪವಾಸವನ್ನ ಮುಂದುವರೆಸುವ ಅವಶ್ಯಕತೆ ಇಲ್ಲ ಎಂದಿದೆ.
ಇನ್ನು ದೇಶದಲ್ಲಿ ಏಪ್ರಿಲ್ 14 ರಿಂದ ರಂಜಾನ್ ತಿಂಗಳು ಪ್ರಾರಂಭವಾಗುತ್ತದೆ.









