ಬೆಡ್, ಆಕ್ಸಿಜನ್ ಕೊರತೆ ಆಯ್ತು ಕೊರೊನಾ ವಾಕ್ಸಿನ್ ಕೊರತೆ bangalore
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾದಾಗಿನಿಂದಲೂ ಒಂದಲ್ಲಾ ಒಂದು ಕೊರತೆ ಕಾಣುತ್ತಲೇ ಇದೆ.
ಮೊದಲು ಬೆಡ್ ಸಮಸ್ಯೆ ಎದುರಾದ್ರೆ, ಇದರ ಬೆನ್ನಲ್ಲೆ ಆಕ್ಸಿಜನ್ ಕೊರತೆ ಉಂಟಾಯಿತು. ಇದೀಗ ರಾಜ್ಯದಲ್ಲಿ ಕೊರೊನಾ ವಾಕ್ಸಿನ್ ಸಮಸ್ಯೆ ಉಂಟಾಗಿದೆ.
ಕೊರೊನಾ ವಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಸರ್ಕಾರ ಬೊಬ್ಬೆ ಹೊಡೆಯುತ್ತಲೇ ಇದೆ.
ಇದನ್ನ ನಂಬಿಕೊಂಡು ಆಸ್ಪತ್ರೆಗೆ ಹೋದ್ರೆ ಮಾತ್ರ ಅಲ್ಲಿ ಔಟ್ ಆಫ್ ಸ್ಟಾಕ್ ಅಂತಾ ಬೋರ್ಡ್ ಹಾಕಿದ್ದಾರೆ.
ಇನ್ನು ಕೆಲವು ಕಡೆ ವಾಕ್ಸಿನ್ ಗಾಗಿ ಜನರು ಬಡಿದಾಡಿಕೊಂಡಿದ್ದಾರೆ.
ನಗರದ ಬೋರಿಂಗ್ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರ ವಾಕ್ಸಿನ್ ಗಾಗಿ ಮುಗಿಬಿದ್ದಿದ್ದಾರೆ.
ಇದರಲ್ಲಿ ಹೆಚ್ಚಾಗಿ ಎರಡನೆಯ ಲಸಿಕೆ ಪಡೆಯಲು ಜನರೇ ಹೆಚ್ಚಿದ್ದಾರೆ. ಆದ್ರೆ ಇಲ್ಲಿ 50 ಜನರಿಗೆ ಮಾತ್ರ ಲಸಿಕೆ ಕೋಡಲು ಟೋಕನ್ ನೀಡಿದ್ದಾರೆ.
ಇದಲ್ಲದೆ ಕೋವಿಡ್ ಶೀಲ್ಡ್, ಕೋವ್ಯಕ್ಸಿನ್ ಲಸಿಕೆ ವಿಚಾರವಾಗಿ ಆಸ್ಪತ್ರೆ ಸಿಬ್ಬಂದಿ ಜೊತೆ ಜನರು ವಾಗ್ವಾದ ನಡೆಸುತ್ತಿದ್ದಾರೆ.










