ಕೊರೊನಾ ಲಸಿಕೆ | ವಷಾರ್ಂತ್ಯಕ್ಕೆ ಎಲ್ಲರಿಗೂ ಡಬಲ್ ಡೋಸ್ ಅನುಮಾನ Corona Vaccine saaksha tv
ನವದೆಹಲಿ : ದೇಶದಲ್ಲಿ ಕೊರೊನಾ ಕಾಟ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ಹೆಮ್ಮಾರಿ ಸೋಂಕಿನ ಸಂಕಷ್ಟ ದೂರವಾಗಿಲ್ಲ.
ಹೀಗಾಗಿ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಮುಂದುವರಿಸಲಾಗಿದೆ.
ಈ ನಿಟ್ಟಿನಲ್ಲಿ ಭಾರತ ಇತ್ತೀಚೆಗೆ ನೂರು ಕೋಟಿ ಡೋಸ್ ನೀಡುವ ಮೂಲಕ ದಾಖಲೆ ಮಾಡಿತ್ತು.
ಈ ವೇಳೆ ಕೇಂದ್ರ ಆರೋಗ್ಯ ಇಲಾಖೆವು 2021ರ ಅಂತ್ಯದ ವೇಳೆಗೆ ದೇಶದ ಎಲ್ಲ ವಯಸ್ಕರಿಗೆ ವ್ಯಾಕ್ಸಿನ್ ನೀಡುವ ಗುರಿಯನ್ನು ಹೊಂದಿರುವುದಾಗಿ ಹೇಳಿತ್ತು.
ಆದ್ರೆ ಈ ವರ್ಷದ ಅಂತ್ಯಕ್ಕೆ ಎಲ್ಲರಿಗೂ ಡಬಲ್ ಡೋಸ್ ಲಸಿಕೆ ನೀಡುವುದು ಅನುಮಾನವಾಗಿದೆ.
ಹೌದು..! ವಷಾರ್ಂತ್ಯಕ್ಕೆ ದೇಶದ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ವ್ಯಾಕ್ಸಿನ್ ನೀಡುವುದು ಅನುಮಾನ ಎಂದು ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸಿನೇಷನ್ ಪ್ರಗತಿ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾರತದ 94 ಕೋಟಿ ವಯಸ್ಕರಿಗೆ ಎರಡು ಡೋಸ್ ಈ ವಷಾರ್ಂತ್ಯಕ್ಕೆ ನೀಡಲು ಸಾಧ್ಯವಿಲ್ಲ. ಆದರೂ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ದೇಶದಲ್ಲಿ ಇನ್ನೂ 20 ಕೋಟಿಯಷ್ಟು ಜನರು ಒಂದು ಡೋಸ್ ವ್ಯಾಕ್ಸಿನ್ ಕೂಡಾ ಪಡೆದಿಲ್ಲ.
ಸಾಕಷ್ಟು ವ್ಯಾಕ್ಸಿನ್ ದಾಸ್ತನು ಇದ್ದರೂ, ವ್ಯಾಕ್ಸಿನ್ ಹಂಚಿಕೆಯ ವೇಗ ಕಡಿಮೆಯಾಗಿದೆ.
ಈ ಪರಿಣಾಮ ವಷಾರ್ಂತ್ಯಕ್ಕೆ ನಮ್ಮ ಗುರಿ ತಲುಪಲು ಅಡ್ಡಿ ಉಂಟು ಮಾಡಲಿದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.