ಮೇ 15ರ ಬಳಿಕ 18-44 ವಯಸ್ಸಿನವರಿಗೆ ಕೊರೊನಾ ಲಸಿಕೆ
ಬೆಂಗಳೂರು : ಮೇ 15 ರ ಬಳಿಕ ರಾಜ್ಯದಲ್ಲಿ 18-44 ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಲಸಿಕೆ ವಿತರಣೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಮೇ 15ರ ಬಳಿಕ 18 ವರ್ಷ ಮೇಟ್ಟವರಿಗೆ ಲಸಿಕೆ ನೀಡುತ್ತೇವೆ ಎಂದರು.
ಇನ್ನು ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮಾತನಾಡಿ, ನಾವು ಅಂದುಕೊಟ್ಟ ಮಟ್ಟಿಗೆ ಲಾಕ್‍ಡೌನ್ ಯಶಸ್ವಿಯಾಗಿಲ್ಲ.
ಈ ನಿಟ್ಟಿನಲ್ಲಿ ಸಿಎಂ ಬಳಿ ಚರ್ಚೆ ನಡೆಸಲಾಗುವುದು ಎಂದು ಮತ್ತೆ ಕೊರೊನಾ ಕಫ್ರ್ಯೂ ಮುಂದುವರೆಸುವ ಬಗ್ಗೆ ಸುಳಿವು ನೀಡಿದರು.
ಇದೇ ವೇಳೆ ತಮ್ಮ ರಾಜೀನಾಮೆ ಬಗ್ಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿ, ನಾನು ಈಗಾಗಲೇ ರಾಜೀನಾಮೆ ನೀಡಿ ಅನುಭವಿಸಿರುವ ನೋವು ನನಗೆ ಗೊತ್ತು.
ಏನೇ ಮಾತನಾಡಿದ್ರು ಕೂಡ ನಾನು ಕೊರೊನಾ ಸೊಂಕು ನಿಯಂತ್ರಣಕ್ಕೆ ಬಂದ ನಂತರ ಮಾತನಾಡುವೆ ಅಂತ ಹೇಳಿದರು.










