ಕಳೆದ 24 ಗಂಟೆಗಳಲ್ಲಿ 1247 ಹೊಸ ಕೋವಿಡ್ ಕೇಸ್ ಪತ್ತೆ….
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಲೇ ಇದೆ. ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1247 ಹೊಸ ಪ್ರಕರಣಗಳು ಕಂಡುಬಂದಿವೆ, ಇದು ಸೋಮವಾರಕ್ಕಿಂತ ಶೇಕಡಾ 43 ರಷ್ಟು ಕಡಿಮೆಯಾಗಿದೆ.
ಸೋಮವಾರದಂದು ದೈನಂದಿನ ಪ್ರಕರಣಗಳಲ್ಲಿ 90% ಜಿಗಿತ ಕಂಡುಬಂದಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಕೊರೊನಾ ನಾಲ್ಕನೇ ಅಲೆ ಆಗಮನದ ಭಯ ಕಾಡಲಾರಂಭಿಸಿತು. ಆದರೆ, ಪದ್ಮಶ್ರೀ, ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಪ್ರೊ. ಮನೀಂದ್ರ ಅಗರ್ವಾಲ್ ದೇಶದಲ್ಲಿ ನಾಲ್ಕನೇ ಅಲೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಕಳೆದ 24 ಗಂಟೆಗಳಲ್ಲಿ 2,183 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಮಂಗಳವಾರ ಬೆಳಗ್ಗೆ 1247 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ 1150 ಹೊಸ ರೋಗಿಗಳು ಪತ್ತೆಯಾಗಿದ್ದಾರೆ.
ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಯುಪಿ ಸರ್ಕಾರವು ಗುರುಗ್ರಾಮ್, ಫರಿದಾಬಾದ್, ಸೋನಿಪತ್ ಮತ್ತು ಜಜ್ಜರ್, ಗೌತಮ್ ಬುಧ್ ನಗರ, ಗಾಜಿಯಾಬಾದ್, ಹಾಪುರ್, ಮೀರತ್, ಬುಲಂದ್‌ಶಹರ್ ಮತ್ತು ಬಾಗ್‌ಪತ್ ಮತ್ತು ಹರಿಯಾಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಒಂಬತ್ತು ರಾಜ್ಯಗಳ 34 ಜಿಲ್ಲೆಗಳು ರೆಡ್ ಅಲರ್ಟ್ ನಲ್ಲಿವೆ.