3 ಲಕ್ಷ ಸಾವು | ವಿಷಾದದ ಮೈಲುಗಲ್ಲು ದಾಟಿದ ಭಾರತ corona
ನವದೆಹಲಿ : ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗಿದ್ದು, ಇದರೊಂದಿಗೆ ಭಾರತ ಮತ್ತೊಂದು ವಿಷಾದದ ಮೈಲುಗಲ್ಲು ದಾಟಿದೆ.
ಕೊರೊನಾ ಸಾವುಗಳಲ್ಲಿ ಯು.ಎಸ್ ಮತ್ತು ಬ್ರೆಜಿಲ್ ನಂತರ ಭಾರತದ ಸಾವಿನ ಸಂಖ್ಯೆ ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಎಂದು ವರದಿಯಾಗಿದೆ.
ಇದು ಜಾಗತಿಕವಾಗಿ ಸಂಭವಿಸಿದ ಸುಮಾರು 34.7 ಮಿಲಿಯನ್ ಕೊರೊನಾ ವೈರಸ್ ಸಾವಿನ ಪೈಕಿ ಶೇ 8.6 ನಷ್ಟಿದೆ.
ಮೇ 24 ರಂದು ಭಾರತದಲ್ಲಿ 4,454 ಮಂದಿಗೆ ಹೆಮ್ಮಾರಿಗೆ ಪ್ರಾಣ ತೆತ್ತಿದ್ದರು.
ಇದರೊಂದಿಗೆ ಭಾರತದಲ್ಲಿ ಒಟ್ಟು 3,03,720 ಜನರು ಶತಮಾನದ ಭೀಕರ ಸಾಂಕ್ರಾಮಿಕ ರೋಗಕ್ಕೆ ಬಲಿಯಾದಂತಾಗಿದೆ.
ಸದ್ಯ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾವಿನ ಪ್ರಮಾಣ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.