ಮಾಧ್ಯಮಗಳು ಭಯ ಹುಟ್ಟಿಸುವೆ : ವೀಕ್ಷಕರು ಚಾನಲ್ ಬದಲಿಸಬೋದು ಎಂದ ಹೈಕೋರ್ಟ್
ಬೆಂಗಳೂರು : ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ಮಾಧ್ಯಮದಲ್ಲಿ ನಿಬರ್ಂಧ ಕೋರಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆ ಎಂದು ಹೇಳಿದೆ.
ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ಮಾದ್ಯಮಗಳಲ್ಲಿ ನಿಬರ್ಂಧ ಕೋರಿ ಲೆಟ್ಸ್ ಕಿಟ್ ಫೌಂಡೇಶನ್ ಪಿಐಎಲ್ ಸಲ್ಲಿಸಿತ್ತು. ಮಾಧ್ಯಮಗಳು ಜೀವಭಯದ ಫೋಬಿಯಾ ಹುಟ್ಟಿಸುತ್ತಿವೆ ಕೋವಿಡ್ ನಿಂದ ನರಳುವ ಸಾವಿನ ದೃಶ್ಯ ಪ್ರಸಾರ ಮಾಡುತ್ತಿವೆ.
ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇಂಥ ದೃಶ್ಯಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿದೆ ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ.
ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿತ್ತು
ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಸೂಚಿಸಿದೆ. ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆ.
ನಿಮಗೆ ಉತ್ತಮವಾದುದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು ಎಂದು ಸಿಜೆ ಎಎಸ್ ಒಕಾ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಗೆ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.









