ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ರೌದ್ರಾವತಾರ ಮುಂದುವರೆದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21 ಸಾವಿರದ ಗಡಿದಾಟಿದೆ. ಇಮದು ಒಂದೇ ದಿನ ಬಳ್ಳಾರಿಯಲ್ಲಿ 400 ಕೊರೊನಾ ಪಾಸಿಟಿವ್ ಕೇಸ್ ಗಳು ಧೃಡವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 21398ಕ್ಕೆ ಏರಿಕೆಯಾಗಿದೆ. ಇಂದು 5 ಜನ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ ಕೊರೊನಾಗೆ ಬಲಿಯಾದವರ ಸಂಖ್ಯೆ 260ಕ್ಕೆ ಏರಿದೆ.
ಇನ್ನೂ ಗುಣಮುಖರ ಸಂಖ್ಯೆಯಲ್ಲೂ ಕ್ರಮೇಣವಾಗಿ ಏರಿಕೆಯಾಗುತ್ತಿದ್ದು, ಈವರೆಗೂ ಮಹಾಮಾರಿಯಿಂದ 16382 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 4756 ಪ್ರಕರಣಗಳು ಇನ್ನೂ ಸಕ್ರೀಯವಾಗಿವೆ. ಇಂದು ಹೊಸದಾಗಿ ಪತ್ತೆಯಾದ ಸೋಂಕಿತರ ಪೈಕಿ ಬಳ್ಳಾರಿ-169, ಸಂಡೂರು-39, ಸಿರುಗುಪ್ಪ- 15, ಕೂಡ್ಲಿಗಿ- 38, ಹಡಗಲಿ-35, ಹೊಸಪೇಟೆ-46 ಹ.ಬೊ.ಹಳ್ಳಿ-30 ಹರಪನಹಳ್ಳಿ- 23, ಹಾಗೂ ಇತರೆ ರಾಜ್ಯದ ಮೂವರು ಹಾಗೂ ಇತರೆ ಜಿಲ್ಲೆಯ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.