ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ : ಹೆಚ್.ವಿಶ್ವನಾಥ್
ಮೈಸೂರು : ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್, ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ಕಿಡಿಕಾರಿದರು. ಸದ್ಯ ರಾಜ್ಯದ ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ.
ಸರ್ಕಾರದ ಆಡಳಿತ ವಿಕೇಂದ್ರೀಕರಣ ಆಗಿದೆ. ಇದೆಲ್ಲವು ಪಸೆರ್ಂಟೇಜ್ ಗಾಗಿ ಮಾಡಿಕೊಂಡಿರೋದು. ಕೊರೊನಾ ವಿಚಾರದಲ್ಲಿ ಡಿಸಿಗಳಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ.
ಜಿಲ್ಲಾ ಮಂತ್ರಿಗೆ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ಆಕ್ರೋಶ ಹೊರಹಾಕಿದರು.
ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನೆ ಕೂತ್ತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ.
ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳುತ್ತ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಕೊರೊನಾದಿಂದ ಮುಕ್ತಗೊಳಿಸಿ ಎಂದರು.