ರಾಜ್ಯದಲ್ಲಿ ಇಂದು ಹೆಮ್ಮಾರಿ ಕೊರನಾ ನಿಜಕ್ಕೂ ರಣ ರಕ್ಕಸನ ರೂಪವನ್ನೇ ತಾಳಿದ್ದಾನೆ. ಕೊರೊನಾ ಅಬ್ಬರಕ್ಕೆ ಇಡೀ ರಾಜ್ಯದ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕೇವಲ 24 ಗಂಟೆಗಳಲ್ಲೇ ರಾಜ್ಯದಲ್ಲಿ ಒಟ್ಟು 8161 ಕೇಸ್ ಗಳು ದಾಖಲಾಗಿರೋದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕಿಲ್ಲರ್ ಕೊರೊನಾಗೆ ಒಂದೇ ದಿನ 148 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,91, 826 ಆಗಿದೆ. ಇನ್ನೂ ಬಲಿಯಾದವರ ಸಂಖ್ಯೆ 4958 ಕ್ಕೆ ಏರಿಕೆಯಾಗಿದೆ.
ಇತ್ತ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಂದಿನಂತೆ ಕೊರೊನಾ ಹಾವಳಿ ಜೋರಾಗಿಯೇ ಇದೆ. ಒಂದೇ ದಿನ 2294 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದ್ರೆ, 61 ಮಂದಿ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಲ್ಲಿ ಈವರೆಗೆ 112087 ಮಂದಿಗೆ ಕೊರೋನಾ ತಗುಲಿದೆ. ಈವರೆಗೆ 1755 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇಂದು 6814 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 204439 ಜನ ಗುಣಮುಖರಾಗಿದ್ದಾರೆ. 82410 ಸಕ್ರಿಯ ಕೇಸ್ಗಳಿವೆ.








