ರಾಜ್ಯದಾದ್ಯಂತ ಡಿಸ್ಕೌಂಟ್ ಲಾಕ್ ಡೌನ್ : ಪೊಲೀಸರಿಂದ ಲಾಠಿ ಪ್ರಯೋಗ corona
ಬೆಂಗಳೂರು : ರಾಜ್ಯದಲ್ಲಿ ಕೈ ಮೀರಿ ಹೋಗಿರುವ ಕೊರೊನಾ ಹುಚ್ಚು ಕುದುರೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಿದೆ.
ಡಿಸ್ಕೌಂಟ್ ಲಾಕ್ ಡೌನ್ ಆಗಿದ್ದರಿಂದ ಜನರು ಎಂದಿನಂತೆ ಅಗತ್ಯವಸ್ತುಗಳ ಖರೀದಿಗೆ ರಸ್ತೆಗಿಳಿದಿದ್ರು. ಆದ್ರೆ ಪೊಲೀಸರು ಅವರಿಗೆ ಶಾಕ್ ನೀಡಿದ್ದಾರೆ.
ಸುಖಾಸುಮ್ಮನೆ ರಸ್ತೆಗೆಳಿದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಕೆ.ಆರ್.ಮಾರ್ಕೆಟ್ ನಲ್ಲಿ ವಿನಾಯಿತಿ ನೀಡಿದ ಅವಧಿಯಲ್ಲಿಯೇ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಮಾರ್ಕೇಟ್ ನಲ್ಲಿ ಪ್ರಯಾಣಿಕರಿದ್ದ ಸುಮಾರು 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಲಾಗಿದೆ.
ಇತ್ತ ಬೆಳಗಾವಿಯಲ್ಲೂ ಕೂಡ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಆನೇಕಲ್ ನಲ್ಲಿ ಬೆಳಗ್ಗೆಯೇ ಪೆÇಲೀಸರು ರಸ್ತೆಗಿಳಿದಿದ್ದು, ಲಾಕ್ ಡೌನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.










