ಧಾರವಾಡ : ದೇಶದಲ್ಲಿ ಕೊರೊನಾ ವೈರಸ್ ಕಂಟ್ರೋಲ್ ಆಗ್ತಾ ಇಲ್ಲ ಅನ್ನೋದಕ್ಕಿಂತ ನಮ್ಮ ರಿಕವರಿ ಚೆನ್ನಾಗಿದೆ. ಸರ್ಕಾರದ ಮುನ್ನಚ್ಚರಿಕಾ ಕ್ರಮ, ಜನರಿಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಲಿಸಿದರೆ ಕೊರೊನಾ ನಮ್ಮ ದೇಶದಲ್ಲಿ ಹೆಚ್ಚಿದೆ. ಆದರೆ, ಜನಸಂಖ್ಯೆಗೆ ಹೋಲಿಸಿದರೆ ಕಂಟ್ರೋಲ್ ಆಗಿದೆ ಎಂದರು.
ಇನ್ನು ಧಾರವಾಡದಲ್ಲಿ ಕೊರೊನಾ ಕಂಟ್ರೋಲ್ ಗಾಗಿ 10 ಕೋಟಿ ರೂ. ಬೇಕು ಎಂದು ಇಲ್ಲಿನ ಜಿಲ್ಲಾಧಿಕಾರಿ ಕೇಳಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ ಸಚಿವರು, ಬೇರೆ ಬೇರೆ ಕಂಪನಿಗಳಿಂದ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. 6 ಕೋಟಿ 30 ಲಕ್ಷ ಕೊರೊನಾ ನಿಯಂತ್ರಣಕ್ಕೆ ಹಣ ಬಂದಿದೆ. ಕಿಮ್ಸ್ ಗೆ ವೆಂಟಿಲೇಟರ್ ಬೇಕು ಅಂತಾ ಸರ್ಕಾರಕ್ಕೆ ಕೇಳಿದ್ದೇನೆ ಎಂದರು.
ಮಳೆ ಪ್ರವಾಹದ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, 5 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದೆ. ಎಸ್ಡಿಆರ್ಎಫ್ ತಂಡ ಕೂಡ ಇದೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.