ಬೆಂಗಳೂರು: ನಿನ್ನೆ ಪಾದರಾಯನಪುರದ ಕೆಲ ನಿವಾಸಿಗಳನ್ನ ಕ್ವಾರಂಟೈನ್ ಗೆ ಒಳಪಡಿಸುವ ವಿಚಾರವಾಗಿ ಸ್ಥಳೀಯರು ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ಗಲಾಟೆ ಮಾಡಿದ್ದರು. ಗಲಭೆಗೆ ಸಂಬಂಧಿಸಿದಂತೆ 54 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರಿಗೆ ಇದೀಗ ಕೊರೊನಾ ಸೋಂಕು ಹರಡುವ ಆತಂಕ ಶುರುವಾಗಿದೆ.
ಗಲಾಟೆ ಹಿನ್ನೆಲೆ ಸೀಲ್ ಡೌನ್ ಆಗಿದ್ದ ಪ್ರದೇಶ ಮತ್ತು ಕ್ವಾರೆಂಟೈನ್ ಗೆ ಒಳಪಟ್ಟವರ ಮನೆಗಳ ಸುತ್ತ ಪೊಲೀಸರು ಪುಂಡರಿಗಾಗಿ ಹುಡುಕಾಟ ನಡೆಸಿದ್ದರು. ಸದ್ಯ ಅರೆಸ್ಟ್ ಆಗಿರುವವರ ಪೈಕಿ ಯಾರಿಗಾದ್ರು ಕೊರೊನಾ ಸೋಂಕಿನ ಲಕ್ಷಣಗಳು ಇದ್ವಾ ಅನ್ನೊ ಆತಂಕ ಪೊಲೀಸರಿಗೆ ಶುರುವಾಗಿದೆ.
ಈ ಹಿನ್ನೆಲೆ ರಾತ್ರಿ ಡ್ಯೂಟಿಯಲ್ಲಿದ್ದವರು ದೇಹ ಪೂರ್ತಿ ಸ್ಯಾನಿಟೈಸ್ ಮಾಡಿಕೊಂಡು ಮನೆಗೆ ಹೋಗುವಂತೆ ಸೂಚನೆ ನೀಡಲಾಗಿದೆ. ಯಾರು ಕೂಡ ನೇರವಾಗಿ ಮನೆಗೆ ಹೋಗದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.








