ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬೆಂಗಳೂರು ನಗರವನ್ನು 8 ವಲಯಗಳನ್ನಾಗಿ ಮಾಡಿ ಎಂಟು ಸಚಿವರಿಗೆ ಉಸ್ತುವಾರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎಂಟು ಸಚಿವರು ನಗರದಲ್ಲಿನ ಕೊರೊನಾ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಮುಂದಿನ ಹೆಜ್ಜೆ ಇಡಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಂಟು ಸಚಿವರ ಜತೆ ಚರ್ಚೆ ನಡೆಸಲಿದ್ದಾರೆ.
ಸಂಪುಟ ಸಭೆಯ ನಂತರ ಈ ವಿಷಯ ತಿಳಿಸಿದ ಕಾನುಣು ಸಚಿವ ಜೆ.ಸಿ ಮಾಧುಸ್ವಾಮಿ, ಕೊರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಬೆಡ್, ಆಂಬುಲೆನ್ಸ್ ಸೇರಿ ಹಲವು ವಿಚಾರಗಳ ಬಗ್ಗೆ ಶಾಸಕರು ಹಾಗೂ ಬಿಬಿಎಂಪಿ ಕಾರ್ಪೋರೇಟರ್ಗಳ ಜತೆ ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಲಿದ್ದಾರೆ.
ರಾಜ್ಯದ ಎಲ್ಲ ಕಡೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಿ ಶೀಘ್ರ ಫಲಿತಾಂಶ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೈ ಫ್ಲೋ ಆಕ್ಸಿಜನ್ ಅಳವಡಿಸುವುದು ಮತ್ತು ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?
ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...








