ಟಿಟಿಡಿಯ ಶ್ರೀ ಪೆದ್ದ ಜೀಯರ್ ಸ್ವಾಮಿ ಮಠದ ಹಿರಿಯ ಮಠಾಧೀಶರಿಗೆ ಕೊರೊನಾ ಸೋಂಕು
ತಿರುಮಲ, ಜುಲೈ 18: ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಯ ಶ್ರೀ ಪೆದ್ದ ಜೀಯರ್ ಸ್ವಾಮಿ ಮಠದ ಹಿರಿಯ ಮಠಾಧೀಶರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.
ಟಿಟಿಡಿ ಮಂಡಳಿಯ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅವರು ಶನಿವಾರ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, 63 ವರ್ಷದ ಮಠಾಧೀಶರನ್ನು ಚೆನ್ನೈನ ಕಾರ್ಪೊರೇಟ್ ಆಸ್ಪತ್ರೆಗೆ ಸ್ಥಳಾಂತರಿಸಲು ಚಿಂತನೆ ನಡೆಸಲಾಯಿತ್ತಾದರೂ ಅವರು ಅದನ್ನು ನಿರಾಕರಿಸಿದ್ದು, ಮಠದಲ್ಲಿಯೇ ಚಿಕಿತ್ಸೆ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದ ಪ್ರಕಾರ ಅವರು, ಕಳೆದ ಭಾನುವಾರದಿಂದ ನಾಲ್ಕು ತಿಂಗಳ ಕಾಲ ಚಾತುರ್ಮಾಸ್ಯ ವ್ರತ ದೀಕ್ಷಾದಲ್ಲಿದ್ದು, ಆದ್ದರಿಂದ ಅವರು ಇಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಆದ್ಯತೆ ನೀಡುತ್ತಿದ್ದಾರೆ ಎಂದು ರೆಡ್ಡಿ ಹೇಳಿದರು. ಮಠಾಧೀಶರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷರು ಹೇಳಿದರು.
ಜೂನ್ 11 ರಂದು ಭಕ್ತರಿಗಾಗಿ ದೇವಾಲಯವನ್ನು ಪುನಃ ತೆರೆಯಲಾಗಿದ್ದರಿಂದ, ಈವರೆಗೆ 16 ಅರ್ಚಕರು (ಪುರೋಹಿತರು) ಸೇರಿದಂತೆ ಸುಮಾರು 160 ಟಿಟಿಡಿ ಸಿಬ್ಬಂದಿಗಳು ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.