ರಾಜ್ಯದಲ್ಲಿ ಮುಂದುವರಿದ ಕೊರೊನಾ ಮಹಾಸ್ಪೋಟ – ಗುರುವಾರ 2282 ಮಂದಿಗೆ ಸೋಂಕು
ಬೆಂಗಳೂರು, ಜುಲೈ 10: ರಾಜ್ಯದಲ್ಲಿ ಗುರುವಾರ ಒಂದೇ ದಿನ 2282 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 31,159ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 1,373 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗಿನ ಒಟ್ಟು ಸೋಂಕಿತರ ಸಂಖ್ಯೆಯು 13,882ಕ್ಕೆ ಏರಿಕೆಯಾಗಿದೆ.
ಬುಧವಾರ ಸಂಜೆಯಿಂದ ಗುರುವಾರ ಸಂಜೆಯವರೆಗೆ ರಾಜ್ಯದಲ್ಲಿ ಕೊರೋನಾದಿಂದ 17 ಜನರು ಸಾವನ್ನಪ್ಪಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 487ಕ್ಕೆ ಏರಿಕೆಯಾಗಿದೆ.
ಈ ನಡುವೆ 12,833 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 17,782 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಬುಧವಾರ ಸಂಜೆಯಿಂದ ಗುರುವಾರ ಸಂಜೆಯವರೆಗೆ ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ
ಬೆಂಗಳೂರು- 1373, ದಕ್ಷಿಣ ಕನ್ನಡ-167, ಕಲಬುರಗಿ-85, ಧಾರವಾಡ-75, ಮೈಸೂರು-52, ಬಳ್ಳಾರಿ 41, ದಾವಣಗೆರೆ-40, ಶಿವಮೊಗ್ಗ-37, ಬಾಗಲಕೋಟೆ-36, ಕೋಲಾರ-34, ಚಿಕ್ಕಬಳ್ಳಾಪುರ-32, ತುಮಕೂರು-27, ಮಂಡ್ಯ-24, ಉತ್ತರ ಕನ್ನಡ-23, ಉಡುಪಿ-22, ಹಾಸನ-21, ಹಾವೇರಿ-18, ರಾಮನಗರ-17, ಯಾದಗಿರಿ-16, ರಾಯಚೂರು-16, ಬೆಂಗಳೂರು ಗ್ರಾಮಾಂತರ-16, ಬೀದರ್-15, ಚಾಮರಾಜನಗರ-12, ಬೆಳಗಾವಿ-9, ಗದಗ-6, ಚಿಕ್ಕಮಗಳೂರು-5, ಕೊಡಗು-4, ಕೊಪ್ಪಳ-2, ಚಿತ್ರದುರ್ಗ-2, ವಿಜಯಪುರದಲ್ಲಿ ಒಂದು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.








