ತಿರುಮಲ ತಿರುಪತಿ ದೇವಸ್ತಾನಂನ ಪುರೋಹಿತರು ಕೊರೋನಾ ಸೋಂಕಿಗೆ ಬಲಿ
ತಿರುಪತಿ, ಅಗಸ್ಟ್ 7: ತಿರುಮಲದಲ್ಲಿರುವ ಭಗವಾನ್ ವೆಂಕಟೇಶ್ವರನ ಪ್ರಸಿದ್ಧ ಬೆಟ್ಟದ ದೇವಾಲಯವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಯ 48 ವರ್ಷದ ಪುರೋಹಿತರು ಗುರುವಾರ ಕೊರೋನವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
ಈ ವಾರದ ಆರಂಭದಲ್ಲಿ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದ್ದು, ಬಳಿಕ ಅವರನ್ನು ಇಲ್ಲಿ ರಾಜ್ಯ ಸರ್ಕಾರ ಗೊತ್ತುಪಡಿಸಿರುವ ಕೋವಿಡ್-19 ಆರೈಕೆ ಸೌಲಭ್ಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 11 ರಂದು ಭಕ್ತರಿಗಾಗಿ ಬೆಟ್ಟದ ದೇವಾಲಯವನ್ನು ಪುನಃ ತೆರೆಯಲಾಗಿದ್ದು, ಟಿಟಿಡಿಯ ಹಿರಿಯ ಅರ್ಚಕ ಪೆಡ್ಡಾ ಜೀಯರ್ ಸ್ವಾಮಿ,16 ಪುರೋಹಿತರು ಸೇರಿದಂತೆ ಸುಮಾರು 170 ಟಿಟಿಡಿ ಸಿಬ್ಬಂದಿಗಳು ಈವರೆಗೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು
ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಜುಲೈ 20 ರಂದು ಕೊರೋನವೈರಸ್ನಿಂದ ಮೃತಪಟ್ಟಿದ್ದರು.