ರಾಯಚೂರು : ಜಿಲ್ಲೆಯಲ್ಲಿ ಕೊರೊನಾ ವೈರಸ್ ಸ್ಫೋಟ ಮುಂದುವರಿದಿದ್ದು, ಇಂದು ಜಿಲ್ಲೆಯಾದ್ಯಂತ 101 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 11,393ಕ್ಕೆ ತಲುಪಿದೆ.
ಇದನ್ನೂ ಓದಿ : ಮೋದಿಯವರೇ ನನ್ಗೆ ಸಿಎಂ ಆಫರ್ ನೀಡಿದ್ದರು : ಹೆಚ್.ಡಿ.ಕುಮಾರಸ್ವಾಮಿ
ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಂದು ರಾಯಚೂರು ತಾಲೂಕಿನಲ್ಲಿ 38, ಮಾನವಿ 7, ಲಿಂಗಸೂಗೂರು 22, ಸಿಂಧನೂರು 19, ದೇವದುರ್ಗ 15 ಪ್ರಕರಣಗಳು ಇಂದು ಪತ್ತೆಯಾಗಿವೆ.
ಇನ್ನು ಜಿಲ್ಲೆಯ ಒಟ್ಟು 11,393 ಸೋಂಕಿತರ ಪೈಕಿ 9,713 ಜನ ಕೊರೊನಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ 1,545 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ 135 ಜನ ಮೃತಪಟ್ಟಿದ್ದಾರೆ.








