ಕೊರೋನಾ ಹಾವಳಿಗೆ ಬೆಚ್ಚಿಬಿದ್ದ ವಜ್ರೋದ್ಯಮ..!
ಹಣಕಾಸು ಸಚಿವಾಲಯಕ್ಕೆ ಮನವಿ ಪತ್ರ
ಇಕ್ಕಟ್ಟಿಗೆ ಸಿಲುಕಿಕೊಂಡಿದೆ 10,000 ಕೋಟಿ ರೂ.ಗಳ ವ್ಯವಹಾರ
ಚೀನಾದ್ಯಂತ ತನ್ನ ಕಬಂಧಬಾಹು ಚಾಚಿರುವ ಕೊರೋನಾ ವೈರಸ್ ನ ಕರಿನೆರಳು ವ್ಯಾಪಾರ ವಾಣಿಜ್ಯೋದ್ಯಮಕ್ಕೂ ಆವರಿಸಿದೆ. ಕೋವಿದ್-19 ನಿಂದಾಗಿ ವಜ್ರೋದ್ಯಮದ ಮೇಲೂ ಹೊಡೆತ ಬಿದ್ದಿದೆ. ಸೂರತ್ನಿಂದ ವಾರ್ಷಿಕವಾಗಿ ಸುಮಾರು 1.50 ಲಕ್ಷ ಕೋಟಿ ರತ್ನ ಮತ್ತು ಆಭರಣಗಳ ರಫ್ತು ವ್ಯವಹಾರ ನಡೆಯುತ್ತದೆ. ಕೊರೋನ ವೈರಸ್ನಿಂದಾಗಿ ಸುಮಾರು 10,000 ಕೋಟಿ ರೂ.ಗಳ ವ್ಯವಹಾರವಾದ ವಜ್ರ ವ್ಯಾಪಾರ ಇದೀಗ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಕರೋನಾ ವೈರಸ್ ಹಾಂಕಾಂಗ್ ಮತ್ತು ಚೀನಾದಲ್ಲಿ ವ್ಯಾಪಾರವನ್ನು ಕಳೆದುಕೊಳ್ಳುತ್ತಿದೆ, ಇದು ಭಾರತೀಯ ರತ್ನದ ಉದ್ಯಮದಲ್ಲಿ ಇದರ ಪಾಲು ಶೇಕಡಾ 35 ರಿಂದ 40 ರಷ್ಟಿದೆ. ಈ ಹಿನ್ನೆಲೆ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಜಿಜೆಇಪಿಸಿ ಆರ್ಬಿಐ ಮತ್ತು ಹಣಕಾಸು ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಿದೆ.








