ನೆಲ್ಯಾಡಿ ಪರಿಸರದ ಇಬ್ಬರಿಗೆ ಕೊರೋನಾ ಸೋಂಕು – ಅಶ್ವಿನಿ ಆಸ್ಪತ್ರೆ ಸೀಲ್ ಡೌನ್ ಸಂಭವ
ನೆಲ್ಯಾಡಿ, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಪರಿಸರದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯ 70 ವರ್ಷದ ಮಹಿಳೆ ಮತ್ತು ಪುತ್ಯೆಯ 75 ವರ್ಷದ ವ್ಯಕ್ತಿಗೆ
ಕೊರೋನಾ ಸೋಂಕು ಪತ್ತೆಯಾಗಿದೆ.

ನೆಲ್ಯಾಡಿ ಪರಿಸರದ ಖಾಸಗಿ ಆಸ್ಪತ್ರೆ ಅಶ್ವಿನಿ ಯಲ್ಲಿ ಮಣ್ಣಗುಂಡಿಯ ಮಹಿಳೆ ಮತ್ತು ಪುತ್ಯೆಯ ವ್ಯಕ್ತಿ ಜ್ವರದ ಹಿನ್ನಲೆಯಲ್ಲಿ ದಾಖಲಾಗಿದ್ದರು. ಅವರು ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಇಬ್ಬರ ಗಂಟಲ ದ್ರವ ಮಾದರಿಯನ್ನು ಕೊರೋನಾ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ನಿನ್ನೆ ತಡರಾತ್ರಿ ವರದಿ ವೈದ್ಯರ ಕೈಸೇರಿದ್ದು, ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯನ್ನು ಮುಂದಿನ 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.








