ಬೆಡ್ ಗಳಿಲ್ಲದೇ ಫುಟ್ ಪಾತ್ ನಲ್ಲೆ ಕೊರೊನಾ ಸೋಂಕಿತರ ನರಳಾಟ
ಬೀದರ್ : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಲಂಗುಲಗಾಮಿಲ್ಲದೇ ಹುಚ್ಚು ಕುದುರೆಯಂತೆ ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಅಟ್ಟಹಾಸ ಮೆರೆಯುತ್ತಿದೆ.
ಪ್ರತಿ ದಿನ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದೆ.
ಆದರೂ ಬೀದರ್ ಬ್ರಿಮ್ಸ್ ಆವರಣದಲ್ಲಿ ಕೊವೀಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಬೆಡ್ ಗಳು ಸಿಗದ ಹಿನ್ನಲೆ ಫುಟ್ ಪಾತ್ ನಲ್ಲೇ ಸೋಂಕಿತರ ನರಳಾಡುವ ಪರಿಸ್ಥಿತಿ ನಿರ್ಮಾವಾಗಿದೆ.
ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದೃಢವಾಗಿದ್ದು, ಬ್ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳೆಲ್ಲವೂ ಭರ್ತಿ ಆಗಿವೆ.
ಈ ಹಿನ್ನೆಲೆ ರೋಗಿಗಳಿಗೆ ಬೆಡ್ ಗಳ ಕೊರತೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಇದು ತಿಳಿಯದೇ ಇಂದು ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೂವರು ಸೋಂಕಿತರ ಚಿಕಿತ್ಸೆಗಾಗಿ ಆಗಮಿಸಿದ್ದಾರೆ.
ಆದ್ರೆ ಅವರಿಗೆ ಬೆಡ್ ಸಿಗದ ಕಾರಣ, ಆಸ್ಪತ್ರೆಯ ಆವರಣದಲ್ಲೇ ಪರದಾಡಿದ್ದಾರೆ.