ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು 60 ಲಕ್ಷ ದಾಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ ಒಂದೇ ದಿನ 82,170 ಹೊಸ ಕೇಸ್ ಗಳು ದೃಢಪಟ್ಟಿದ್ದು, 1,039 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆ 60,74,703ಕ್ಕೆ ಹೆಮ್ಮಾರಿಗೆ ಮೃತಪಟ್ಟವರ ಸಂಖ್ಯೆ 95,542ಕ್ಕೆ ತಲುಪಿದೆ.
ನೀವು ಇದನ್ನೂ ಓದಿ : ಕೊರೊನಾ 2ನೇ ಅಲೆ ; ಕೇರಳದಲ್ಲಿ ಲಾಕ್ ಡೌನ್ ಎಚ್ಚರಿಕೆ
ಇನ್ನು ದೇಶದ ಒಟ್ಟು 60,74,703 ಸೋಂಕಿತರ ಪೈಕಿ 9,62,640 ಸಕ್ರಿಯ ಪ್ರಕರಣಗಳಿದ್ದರೆ, 5,01,6521 ಮಂದಿ ಮಹಾಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದಲ್ಲಿ ನಿನ್ನೆ ಒಂದೇ ದಿನ 7,09,394 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 7,19,67,230 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ.