ಕರೊನಾ ಅಪ್ಡೇಟ್ – 112 ದಿನಗಳ ಬಳಿಕ 12 ಸಾವಿರ ಕೋವಿಡ್ ಸೋಂಕಿತರು ಪತ್ತೆ…
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 12,856 ಹೊಸ ಪ್ರಕರಣಗಳು ಪತ್ತೆಯಾಗಿವೆ. 112 ದಿನಗಳ ನಂತರ, 12,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡುಬಂದಿವೆ. ಈ ಹಿಂದೆ ಫೆಬ್ರವರಿ 24 ರಂದು 13,166 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.
ಗುರುವಾರವೂ 14 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಸಕ್ರಿಯ 63,063 ಕ್ಕೆ ತಲುಪಿದೆ. ಏರಿದೆ. ಇದಕ್ಕೂ ಒಂದು ದಿನ ಮೊದಲು ಬುಧವಾರ 12,213 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಕರೊನಾ ಪ್ರಕರಣಗಳ ಹೆಚ್ಚಳದ ನಂತರ ಮುನ್ನೆಚ್ಚರಿಕೆಯ ಡೋಸ್ನ ಅಂತರವನ್ನ ಕಡಿಮೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಲಸಿಕೆಯ ಅಂತರವನ್ನ 6 ತಿಂಗಳಿಗೆ ಇಳಿಸಲು NTAG ನ ಸ್ಥಾಯಿ ತಾಂತ್ರಿಕ ಉಪ ಸಮಿತಿಯು ಈ ಶಿಫಾರಸನ್ನು ಮಾಡಿದೆ.
ಒಟ್ಟು ಪ್ರಕರಣಗಳು: 4,32,70,577
ಸಕ್ರಿಯ ಪ್ರಕರಣಗಳು: 63,063
ಒಟ್ಟು ಚೇತರಿಕೆ: 4,26,82,697
ಒಟ್ಟು ಸಾವುಗಳು: 5,24,817
ಒಟ್ಟು ವ್ಯಾಕ್ಸಿನೇಷನ್ಗಳು: 1,95,84,03,471