ಕೇರಳ ವಿಮಾನ ದುರಂತ – ಮೃತಪಟ್ಟ ಇಬ್ಬರು ಪ್ರಯಾಣಿಕರಿಗೆ ಕೊರೋನವೈರಸ್
ಕರಿಪುರ, ಅಗಸ್ಟ್ 8: ಕರಿಪುರ ವಿಮಾನ ಅಪಘಾತದಲ್ಲಿ ಮೃತಪಟ್ಟ 19 ಮಂದಿಯಲ್ಲಿ ಕನಿಷ್ಠ ಇಬ್ಬರು ಪ್ರಯಾಣಿಕರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ.
ಶುಕ್ರವಾರ ರಾತ್ರಿ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 190 ಆನ್‌ಬೋರ್ಡ್ ಓವರ್‌ಶಾಟ್‌ನೊಂದಿಗೆ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಭಾರೀ ಮಳೆಯಿಂದಾಗಿ ಲ್ಯಾಂಡಿಗ್ ಸಮಯದಲ್ಲಿ 35 ಅಡಿ ಕೆಳಗೆ ಕಣಿವೆಯಲ್ಲಿ ಬಿದ್ದು ಎರಡು ಭಾಗಗಳಾಗಿ ಒಡೆದಿದೆ.
ಇದೀಗ ಇಬ್ಬರು ಮೃತಪಟ್ಟ ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ರಕ್ಷಣಾ ತಂಡಗಳು ಸಹ ಕೊರೋನಾ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಕೇರಳ ಸರ್ಕಾರ ಸೂಚಿಸಿದೆ. ಮೃತರಿಬ್ಬರಿಗೆ ಸೋಂಕಿರುವುದು ದೃಢಪಟ್ಟಿರುವುದರಿಂದ ಶವಪರೀಕ್ಷೆಯನ್ನು ಸಹ ಪ್ರೋಟೋಕಾಲ್ ಪ್ರಕಾರ ನಡೆಸಲಾಗುವುದು ಎಂದು ಮಲ್ಲಪುರಂ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ತಿಳಿಸಿದ್ದಾರೆ.
ಗಾಯಗೊಂಡ ಎಲ್ಲಾ ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸುಮಾರು 16 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರು ಸೇರಿದಂತೆ ಗಾಯಗೊಂಡವರನ್ನು ಸಹ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.